Asianet Suvarna News Asianet Suvarna News

ಕಮಲಾನಗರದಲ್ಲಿ ಯುವಕನ ಕಗ್ಗೊಲೆ

ಮದನ್,​ ನಿನ್ನೆ ಸಂಜೆ ಕೆಲಸ ಮುಗಿಸಿ ಕಮಲಾನಗರದಲ್ಲಿರೋ ತಮ್ಮ ಮನೆಗೆ ಬಂದಿದ್ದಾನೆ. ಈ ವೇಳೆ ಎರಡು ಬೈಕ್'​​ನಲ್ಲಿ ಬಂದ ಮೂವರು ದುಷ್ಕರ್ಮಿಗಳ ತಂಡ ಮದನ್'​​ನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು, ಪರಾರಿಯಾಗಿದ್ದಾರೆ.

youth murdered by a gang at kamalanagar bengaluru
  • Facebook
  • Twitter
  • Whatsapp

ಬೆಂಗಳೂರು(ಜುಲೈ 24): ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳ ಗುಂಪೊಂದು ಯುವಕನೊಬ್ಬನಿಗೆ ಚಾಕು ಇರಿದು ಕೋಲೆಗೈದಿರುವ ಘಟನೆ ಕಮಲಾನಗರ ವ್ಯಾಪ್ತಿಯಲ್ಲಿ ನಡೆದಿದೆ. ಕಮಲಾನಗರ ಮೂಲದ ಮದನ್ ಎಂಬಾತ​​ ಮೃತ ದುರ್ದೈವಿ.

ಬಜಾಜ್​​ ಅಲೆಯನ್ಸ್​'​ನಲ್ಲಿ ಕೆಲಸ ಮಾಡುತ್ತಿದ್ದ ಮದನ್,​ ನಿನ್ನೆ ಸಂಜೆ ಕೆಲಸ ಮುಗಿಸಿ ಕಮಲಾನಗರದಲ್ಲಿರೋ ತಮ್ಮ ಮನೆಗೆ ಬಂದಿದ್ದಾನೆ. ಈ ವೇಳೆ ಎರಡು ಬೈಕ್'​​ನಲ್ಲಿ ಬಂದ ಮೂವರು ದುಷ್ಕರ್ಮಿಗಳ ತಂಡ ಮದನ್'​​ನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು, ಪರಾರಿಯಾಗಿದ್ದಾರೆ. ಈ ನಡುವೆ ಅಡ್ಡ ಬಂದ ಮದನ್​ ತಾಯಿ ಮೇಲೆ ಕೂಡ ದುಷ್ಕರ್ಮಿಗಳು  ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಬಸವೇಶ್ವರ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲಿಸರು ಬಲೆ ಬೀಸಿದ್ದಾರೆ.

Follow Us:
Download App:
  • android
  • ios