ಯುವಕನೊಬ್ಬ ನಾಯಿಯೊಂದನ್ನು ಜೀವಂತವಾಗಿ ಬೆಂಕಿಯ ಮುಂದೆ ಹಿಡಿದು ಸುಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿರುವ ಯುವಕ ವಲ್ಸಾದ ಆರ್‌ವಿಎಂ ಶಾಲೆಯ ಶಿಕ್ಷಕೆಂದು ಹೇಳಲಾಗುತ್ತಿದೆ.

ನವದೆಹಲಿ (ಡಿ.23): ಯುವಕನೊಬ್ಬ ನಾಯಿಯೊಂದನ್ನು ಜೀವಂತವಾಗಿ ಬೆಂಕಿಯ ಮುಂದೆ ಹಿಡಿದು ಸುಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿರುವ ಯುವಕ ವಲ್ಸಾದ ಆರ್‌ವಿಎಂ ಶಾಲೆಯ ಶಿಕ್ಷಕೆಂದು ಹೇಳಲಾಗುತ್ತಿದೆ.

ಪ್ರಾಣಿಪ್ರಿಯರು ಈ ವಿಡಿಯೋವನ್ನು ನೋಡಿ ಆ ಕ್ರೂರಿಯ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸುತ್ತಿದ್ದಾರೆ. ಈ ವಿಡಿಯೋ ಬಹುಬೇಗನೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡಾ ಆಗುತ್ತಿದೆ. ಹಾಗಾದರೆ ಈ ವಿಡಿಯೋ ನಿಜಕ್ಕೂ ಭಾರತದ್ದೇ, ಈ ವಿಡಿಯೋದಲ್ಲಿರುವ ಅಪರಿಚಿತ ಯುವಕ ಭಾರತೀಯನೇ? ಎಂದು ಪರಿಶೀಲಿಸಿದಾಗ ಬಯಲಾದ ಸತ್ಯವೇ ಬೇರೆ. ಏಕೆಂದರೆ ಇದು ಚೀನಾದಲ್ಲಿ ನಡೆದ ಘಟನೆ.

2017ರಲ್ಲಿ ಅಪರಿಚಿತ ಯುವಕನೊಬ್ಬ ತನಗೆ ನಾಯಿ ಮಾಂಸ ಇಷ್ಟವೆಂದು ಹೇಳುತ್ತಿದ್ದು, ಆತನ ಸ್ನೇಹಿತರು ಈ ದೃಶ್ಯವನ್ನು ಚಿತ್ರೀಕರಿಸಿದ್ದರು. ಆನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ನೋಡಿದ ನಂತರ ಪ್ರಾಣಿಪ್ರಿಯರು ಪ್ರಾಣಿಯನ್ನು ಹಿಂಸಿಸಿದವರಿಗೆ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಸಾಮಾಜಿಕ ಮಾದ್ಯಮಗಳ ಮೂಲಕ ಆಗ್ರಹಿಸಿದ್ದಾರೆ.

 ಹೀಗೆ ಸಾಮಾಜಿಕ ಮಾಧ್ಯಮ ಗಳಲ್ಲಿ ಹರಿಬಿಡಲಾಗಿದ್ದ ವಿಡಿಯೋವು ಭಾರತದಲ್ಲಿ ಭಾರತೀಯ ಶಿಕ್ಷಕನೊಬ್ಬ ಈ ರೀತಿಯ ಅಮಾನವೀಯ ಕೃತ್ಯ ಮಾಡುತ್ತಿದ್ದಾನೆ ಎಂಬರ್ಥದಲ್ಲಿ ವೈರಲ್ ಆಗಿದೆ. ಹೀಗಾಗಿ ನಾಯಿಯ ಕುತ್ತಿಗೆಗೆ ಹಗ್ಗವನ್ನು ಕಟ್ಟಿ ಬೆಂಕಿಯ ಮುಂದೆ ಹಿಡಿದು ಸುಡುತ್ತಿರುವುದು ಭಾರತೀಯ ಎಂದು ಬಿಂಬಿತವಾಗಿದ್ದ ವಿಡಿಯೋ ಸುಳ್ಳು ಎಂಬಂತಾಯಿತು.