Asianet Suvarna News Asianet Suvarna News

ಪ್ರಪಂಚದ ಬಹುತೇಕ ದೇಶಗಳು ಒಮ್ಮೆಲೇ ಹೋರಾಟಕ್ಕಿಳಿದಿರುವ ಅತೀ ದೊಡ್ಡ ಪ್ರತಿಭಟನೆ!

ಈ ವಾರ ವಿಶ್ವಸಂಸ್ಥೆಯಲ್ಲಿ ಜಾಗತಿಕ ತಾಪಮಾನ ವೈಪರೀತ್ಯ ಕುರಿತ ಸಮ್ಮೇಳನ ನಡೆಯುತ್ತಿರುವುದರಿಂದ ಜಗತ್ತಿನ ಗಮನ ಸೆಳೆಯಲು ಮತ್ತು ತಾಪಮಾನ ಬದಲಾವಣೆ ನಿಯಂತ್ರಣದ ತುರ್ತನ್ನು ಅರ್ಥ ಮಾಡಿಸಲು ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ. 

Youth activists gather to fight climate change at UN Summit
Author
Bengaluru, First Published Sep 23, 2019, 1:01 PM IST

ಈ ವಾರ ವಿಶ್ವಸಂಸ್ಥೆಯಲ್ಲಿ ಜಾಗತಿಕ ತಾಪಮಾನ ವೈಪರೀತ್ಯ ಕುರಿತ ಸಮ್ಮೇಳನ ನಡೆಯುತ್ತಿರುವುದರಿಂದ ಜಗತ್ತಿನ ಗಮನ ಸೆಳೆಯಲು ಮತ್ತು ತಾಪಮಾನ ಬದಲಾವಣೆ ನಿಯಂತ್ರಣದ ತುರ್ತನ್ನು ಅರ್ಥ ಮಾಡಿಸಲು ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ.

ಸ್ವೀಡನ್‌ನ ಗ್ರೇಟಾ ಥನ್‌ಬರ್ಗ್‌ ಎಂಬ ಬಾಲಕಿಯ ನೇತೃತ್ವದಲ್ಲಿ ಈ ಹೋರಾಟ ಆರಂಭವಾಗಿದೆ. ಇದು ತಾಪಮಾನ ಬದಲಾವಣೆ ವಿರುದ್ಧ ನಡೆಯುತ್ತಿರುವ ಹಾಗೂ ಜಗತ್ತಿನೆಲ್ಲೆಡೆ ಏಕಕಾಲಕ್ಕೆ ನಡೆಯುತ್ತಿರುವ ಅತಿದೊಡ್ಡ ಹೋರಾಟ ಎಂದು ಇತಿಹಾಸದ ಪುಟ ಸೇರಲಿದೆ.

ಭಾರತದಲ್ಲಿ ಒಬ್ಬರಿಗಿರೋದು 28 ಮರ ಮಾತ್ರ!

ಜಗತ್ತಿನ ಅತಿದೊಡ್ಡ ಪ್ರತಿಭಟನೆಗೆ 16ರ ಬಾಲೆಯ ನೇತೃತ್ವ!

ಗ್ರೇಟಾ ಥನ್‌ಬರ್ಗ್‌ ಸ್ವೀಡನ್‌ ಎಂಬ ಪುಟ್ಟದೇಶದ ಪರಿಸರ ಹೋರಾಟಗಾರ್ತಿ. ಜಾಗತಿಕ ತಾಪಮಾನ ಬದಲಾವಣೆ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವ ಈಕೆ 15ನೇ ವಯಸ್ಸಿಗೇ ಇಡೀ ಜಗತ್ತಿಗೆ ಇದರ ಪ್ರಾಮುಖ್ಯತೆಯನ್ನು ಅರ್ಥಮಾಡಿಸಲು ಹೊರಟಿದ್ದಾಳೆ. 2018ರ ಆಗಸ್ಟ್‌ನಲ್ಲಿ ಶಾಲೆ ಬಿಟ್ಟು ಬಂದು ಸ್ವೀಡನ್ನಿನ ಸಂಸತ್ತಿನ ಎದುರು ಏಕಾಂಗಿಯಾಗಿ ಜಾಗತಿಕ ತಾಪಮಾನ ಏರಿಕೆ ಬಗ್ಗೆ ಅಲ್ಲಿನ ಸರ್ಕಾರದ ಗಮನ ಸೆಳೆಯಲು ಈಕೆ ಧರಣಿ ಕುಳಿತಿದ್ದಳು. ಇದಾದ ಕೆಲವೇ ಸಮಯದಲ್ಲಿ ಹಲವಾರು ವಿದ್ಯಾರ್ಥಿಗಳು ಗ್ರೇಟಾ ಥನ್‌ಬರ್ಗ್‌ಳೊಂದಿಗೆ ಕೈಜೋಡಿಸಿದರು.

ಅವರೆಲ್ಲಾ ಒಟ್ಟಾಗಿ ‘ಫ್ರೈಡೇ ಫಾರ್‌ ಫä್ಯಚರ್‌’ ಹೆಸರಲ್ಲಿ ಹವಾಮಾನ ಬದಲಾವಣೆ ಹೋರಾಟ ಆರಂಭಿಸಿದರು. ಅದಾದ ಬಳಿಕ 2019ರ ವಿಶ್ವಸಂಸ್ಥೆಯ ತಾಪಮಾನ ಬದಲಾವಣಾ ಕಾನ್ಫರೆನ್ಸ್‌ನಲ್ಲಿ ಮಾತನಾಡಿ ಈಕೆ ವಿಶ್ವದ ಗಮನ ಸೆಳೆದಿದ್ದಳು. ಈಗ ಜಗತ್ತಿನಾದ್ಯಂತ ಶಾಲೆಗಳನ್ನು ಬಹಿಷ್ಕರಿಸಿ ಹವಾಮಾನ ಬದಲಾವಣೆ ಕುರಿತ ಚಳವಳಿಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾಳೆ. ಆಕೆಯ ಕರೆಗೆ ಈಗ ಜಗತ್ತಿನಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಇನ್ನು ಕೆಲ ವರ್ಷಗಳಲ್ಲೇ ಸಂಪೂರ್ಣ ಮುಳುಗಲಿವೆ ಈ ಪ್ರದೇಶ : ಎಚ್ಚರ!

ಗ್ರೇಟಾ ಥನ್‌ಬರ್ಗ್‌ಳಿಂದ ಸ್ಫೂರ್ತಿ ಪಡೆದು ಜಗತ್ತಿನಾದ್ಯಂತ 160ಕ್ಕೂ ಅಧಿಕ ದೇಶಗಳಲ್ಲಿ ಪ್ರತಿಭಟನೆ ಆರಂಭವಾಗಿದೆ. ಹಲವು ದೇಶಗಳ ಜನರು ಈ ಬಾಲಕಿಯ ಫೋಟೋ ಹಿಡಿದು ಹವಾಮಾನ ಬದಲಾವಣೆ ಚಳವಳಿಗೆ ಧುಮುಕುತ್ತಿದ್ದಾರೆ.

ಕಳೆದ ವರ್ಷ ಏಕಾಂಗಿ ಹೋರಾಟ ಮಾಡಿದ್ದ ಈಕೆಯ ಬೆಂಬಲಕ್ಕೀಗ ಇಡೀ ಜಗತ್ತು ನಿಂತಿದೆ. 2019ರ ಮೇನಲ್ಲಿ ಈಕೆ ‘ಭವಿಷ್ಯದ ತಲೆಮಾರಿನ ನಾಯಕಿ’ ಎಂದು ಟೈಮ್‌ ಮ್ಯಾಗಜೀನ್‌ ಕವರ್‌ ಪೇಜ್‌ನಲ್ಲಿ ಲೇಖನ ಪ್ರಕಟಿಸಿತ್ತು. ಹಾಗೆಯೇ ನೋಬೆಲ್‌ ಪ್ರಶಸ್ತಿಗೂ ಈಕೆಯ ಹೆಸರು ನಾಮನಿರ್ದೇಶನಗೊಂಡಿದೆ.

ಶಾಲೆ ಬಿಟ್ಟು ಪ್ರತಿಭಟನೆಗೆ ಇಳಿದ ವಿದ್ಯಾರ್ಥಿಗಳು

ವಿಶ್ವಸಂಸ್ಥೆಯಲ್ಲಿ ಈ ವಾರ ನಡೆಯಲಿರುವ ಜಾಗತಿಕ ತಾಪಮಾನ ವೈಪರೀತ್ಯ ಕುರಿತ ಸಮ್ಮೇಳನಕ್ಕೂ ಮುನ್ನ ಜಾಗೃತಿ, ಅರಿವು ಮೂಡಿಸುವ ಉದ್ದೇಶದಿಂದ ಸ್ವೀಡನ್‌ನ ಹೋರಾಟಗಾರ್ತಿ ಗ್ರೇಟಾಥನ್‌ ಬರ್ಗ್‌ ನೇತೃತ್ವದಲ್ಲಿ ಜಗತ್ತಿನಾದ್ಯಂತ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಏಷ್ಯಾ ಪೆಸಿಫಿಕ್‌ ರಾಷ್ಟ್ರಗಳಲ್ಲಿ ಆರಂಭವಾದ ಪ್ರತಿಭಟನೆಯು ಆಫ್ರಿಕಾ, ಲ್ಯಾಟಿನ್‌ ಅಮೆರಿಕ, ಯುರೋಪ್‌ವರೆಗೂ ಹಬ್ಬಿದೆ.

ಮೊನ್ನೆ ಶುಕ್ರವಾರ ನಡೆದ ‘ಫ್ರೈಡೇ ಫಾರ್‌ ಫ್ಯೂಚರ್’ ಎಂಬ ಹೆಸರಿನಲ್ಲಿ ಆರಂಭವಾಗಿರುವ ಈ ಚಳವಳಿಯಲ್ಲಿ ಜಗತ್ತಿನಾದ್ಯಂತ ಸುಮಾರು 40 ಲಕ್ಷ ಜನರು ಭಾಗವಹಿಸಿದ್ದರು. ತಾಪಮಾನ ಏರಿಕೆ ಬಗ್ಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿದಲ್ಲಿ ನಡೆದ ಜಗತ್ತಿನ ಏಕೈಕ ಪ್ರತಿಭಟನೆ ಇದು.

ಶಾಲೆಯನ್ನು ತ್ಯಜಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳು ‘ನಮಗೆ ಸುರಕ್ಷಿತ ಭವಿಷ್ಯ ಬೇಕು. ಭವಿಷ್ಯವೇ ಇಲ್ಲದಿದ್ದರೆ ನಾವು ಶಾಲೆಗೆ ಹೋಗೇಕೆ ಅಭ್ಯಾಸ ಮಾಡಬೇಕು’ ಎನ್ನುತ್ತಿದ್ದಾರೆ. ‘ಬಿ ಎನ್ನುವ ಮತ್ತೊಂದು ಭೂಮಂಡಲವಿಲ್ಲ’ ಮತ್ತು ‘ಮತ್ತೊಮ್ಮೆ ಭೂಮಿಗೆ ಪುನರ್ಜನ್ಮ ನೀಡೋಣ’ ಎಂಬ ಘೋಷಣೆ ಕೂಗಿ ಪ್ರತಿಭಟಿಸುತ್ತಿದ್ದಾರೆ.

ಜಾಗತಿಕ ತಾಪಮಾನ ಏರಿಕೆ ತರುತ್ತಿದೆ ಭಾರಿ ಅನಾಹುತ : ಏಚ್ಚರ!

ಮೊನ್ನೆಯೇ ನಾನಾ ದೇಶಗಳಲ್ಲಿ 40 ಲಕ್ಷ ಜನರಿಂದ ಪ್ರತಿಭಟನೆ

ಶುಕ್ರವಾರ ನಡೆದ ಪ್ರತಿಭನೆಯು ತಾಪಮಾನ ಏರಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿ ನಡೆದ ಜಗತ್ತಿನ ಅತಿ ದೊಡ್ಡ ಪ್ರತಿಭಟನೆ ಎಂದೆನಿಸಿಕೊಂಡಿದೆ. 350.ಆರ್ಗ್‌ ವಿಶ್ವದಾದ್ಯಂತ ಸುಮಾರು 40 ಲಕ್ಷ ಜನರು ಪಾಲ್ಗೊಂಡಿದ್ದಾಗಿ ಹೇಳಿದೆ. ಫ್ರಾನ್ಸ್‌ನಲ್ಲಿ 40,000 ಜನರು, ಉಕ್ರೇನ್‌ನಲ್ಲಿ 2,600 ಜನರು, ದಕ್ಷಿಣ ಆಫ್ರಿಕಾದಲ್ಲಿ 5000 ಜನರು, ಟರ್ಕಿ 10,000 ಜನರು, ಜಪಾನ್‌ನಲ್ಲಿ 5000 ಹಾಗೂ ಲಂಡನ್‌ನಲ್ಲಿ 1 ಲಕ್ಷ , ಆಸ್ಪ್ರೇಲಿಯಾದಲ್ಲಿ 330,000 ಜನರು, ಜರ್ಮನಿಯಲ್ಲಿ 14 ಲಕ್ಷ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾಗಿ 350.ಆರ್ಗ್‌ ಹೇಳಿದೆ.

ಇದರಲ್ಲಿ ಉಗಾಂಡಾದಿಂದ ಹಿಡಿದು ಭಾರತದವರೆಗೆ ಮತ್ತು ಪೆರುವಿನಿಂದ ಗ್ರೆನಡಾದವರೆಗೆ ಹಾಗೂ ಸ್ಪೇನ್ನಿಂದ ಆ್ಯಂಕೋರೇಜ್‌ವರೆಗೆÜ ವಿದ್ಯಾರ್ಥಿಗಳು ಕೂಡ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ ಸುಮಾರು 7,370 ವೆಬ್‌ಸೈಟ್‌ಗಳು ಮತ್ತು 3000 ಕಂಪನಿಗಳು ತಮ್ಮ ಕಚೇರಿಯ ಭಾಗಿಲು ಮುಚ್ಚಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.

ಸಂಘಟಕರು ಹೇಳಿರುವ ಪ್ರಕಾರ ಆಸ್ಪ್ರೇಲಿಯಾವೊಂದರಲ್ಲಿಯೇ 3 ಲಕ್ಷ ವಿದ್ಯಾರ್ಥಿಗಳು ರಾರ‍ಯಲಿ ನಡೆಸಿದ್ದರು. ಆಸ್ಪ್ರೇಲಿಯಾ ತಾಪಮಾನ ಬದಲಾವಣೆಯ ಗಂಭೀರ ಪರಿಣಾಮವನ್ನು ಎದುರಿಸುತ್ತಿದೆ. ಬರ, ಪ್ರವಾಹ ಇತ್ಯಾದಿ ನೈಸರ್ಗಿಕ ವಿಕೋಪಗಳಿಗೆ ಸಾಕ್ಷಿಯಾಗುತ್ತಿದೆ.

ಈ ವಾರ 163 ರಾಷ್ಟ್ರಗಳಲ್ಲಿ ಪ್ರತಿಭಟನೆ

ವಿಶ್ವಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ತಾಪಮಾನ ವೈಪರೀತ್ಯ ಕುರಿತು ಯುವ ಸಮ್ಮೇಳನ ನಡೆಯಲಿದೆ. ಇದರಲ್ಲಿ 60ಕ್ಕೂ ಹೆಚ್ಚು ರಾಷ್ಟ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ಹಾಗೂ 500ಕ್ಕೂ ಯುವ ಹೋರಾಟಗಾರರಿಗೆ ವಿಶ್ವಸಂಸ್ಥೆ ಇದರಲ್ಲಿ ಭಾಗವಹಿಸಲು ಅವಕಾಶ ನೀಡಿದೆ. ಹಿನ್ನೆಲೆಯಲ್ಲಿ ಈ ವಾರ 7 ಖಂಡಗಳ 163 ದೇಶಗಳಲ್ಲಿ ನಡೆಯಲಿರುವ ಜಾಗತಿಕ ತಾಪಮಾನ ಪ್ರತಿಭಟನೆಯಲ್ಲಿ 2500 ಕಾರ‍್ಯಕ್ರಮಗಳನ್ನು ಆಯೋಜಿಸಲಾಗಿದೆ.

ಜಾಗತಿಕ ತಾಪಮಾನ ಬದಲಾವಣೆ ಎಂದರೇನು?

ದಿನೇ ದಿನೇ ಭೂಮಿಯ ತಾಪಮಾನ ಏರಿಕೆಯಾಗುತ್ತಿದೆ. ಭೂಮಿಯ ಈಗಿನ ಸರಾಸರಿ ತಾಪಮಾನ 15 ಡಿಗ್ರಿ ಸೆಲ್ಸಿಯಸ್‌. ಇದು ಹಿಂದೆಂದಿಗಿಂತಲೂ ಹೆಚ್ಚು. ಭೂಮಿ ಮೇಲೆ ಅನೇಕ ವನ್ಯ ಜೀವಿಗಳು ಹಾಗೂ ಸಸ್ಯ ಪ್ರಭೇದಗಳು ಕಾಣೆಯಾಗುತ್ತಿವೆ. ಉತ್ತರ ಧ್ರುವದಲ್ಲಿ ಹಿಮ ಗಡ್ಡೆಗಳು ಕರುಗುತ್ತಿವೆ. ಅಮೆಜಾನ್‌ ಕಾಡುಗಳು ಕಾಳ್ಗಿಚ್ಚಿನಿಂದ ನಾಶವಾಗುತ್ತಿವೆ.

ಅದೇ ರೀತಿಯಾಗಿ ಪ್ರವಾಹ ಹಾಗೂ ಬರ ಎನ್ನುವುದು ಸಾಮಾನ್ಯ ಎನ್ನುವಂತಾಗಿದೆ. ಹೀಗೆ ಜಾಗತಿಕ ಹವಾಮಾನ ಬದಲಾವಣೆಯ ಪರಿಣಾಮ ಮಾತ್ರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಇದೆ. ಈ ಎಲ್ಲಾ ವೈಪರೀತ್ಯಗಳಿಗೆ ಮುಖ್ಯ ಕಾರಣವೇ ಜಾಗತಿಕ ತಾಪಮಾನ ಏರಿಕೆ. ಅಂದರೆ ವಾತಾವರಣದಲ್ಲಿ ಕಾರ್ಬನ್‌ ಡೈ ಆಕ್ಸೈಡ್‌ ಹೊರಸೂಸುವಿಕೆ ಹೆಚ್ಚಾಗಿ, ಹಸಿರು ಮನೆ ಪರಿಣಾಮ ಉಂಟಾಗಿರುವುದು.

ಕಾರ್ಬನ್‌ ಡೈಆಕ್ಸೈಡ್‌ ಹೊರಸೂಸುವಿಕೆ

ವರ್ಷ ಪ್ರಮಾಣ

1900 1.957 ಬಿಲಿಯನ್‌ ಟನ್‌

2018 36.831 ಬಿಲಿಯನ್‌ ಟನ್‌

ದೇಶ ಕಾರ್ಬನ್‌ ಹೊರಸೂಸುವಿಕೆ ಪಾಲು (2018)

ಚೀನಾ 27%

ಅಮೆರಿಕ 15%

ಯುರೋಪಿಯನ್‌ ಯೂನಿಯನ್‌ 9%

ಭಾರತ 7%

ರಷ್ಯಾ 5%

ಜಪಾನ್‌ 3%

ಇರಾನ್‌ 2%

ಸೌದಿ ಅರೇಬಿಯಾ 2%

ದಕ್ಷಿಣ ಕೊರಿಯಾ 2%

ಕೆನಡಾ 2%

ತಾಪಮಾನ ಏರಿಕೆ ನಿಲ್ಲದಿದ್ದರೆ ಏನಾಗುತ್ತದೆ?

ಉಪಗ್ರಹ ಮಾಹಿತಿ ಪ್ರಕಾರ, ಇತ್ತೀಚಿನ ದಶಕಗಳಲ್ಲಿ ಸಮುದ್ರದ ಮಟ್ಟಪ್ರತಿ ವರ್ಷ 3 ಮಿ.ಮೀ.ನಷ್ಟುಏರಿಕೆಯಾಗುತ್ತಿದೆ. ಹಿಮಾಲಯದ ಹಿಮನದಿಗಳು ನಿರಂತರವಾಗಿ ಕರಗುತ್ತಿವೆ. ಗ್ರೀನ್‌ಲ್ಯಾಂಡ್‌ನಲ್ಲಿ ಹಿಮಗಡ್ಡೆಗಳು ದಾಖಲೆ ಮಟ್ಟದಲ್ಲಿ ಕರುಗುತ್ತಿವೆ. ಒಂದು ವೇಳೆ 28 ಲಕ್ಷ ಕ್ಯೂಬಿಕ್‌ ಕಿ.ಮೀ. ಐಸ್‌ ಶೀಟ್‌ ಕರಗಿದಲ್ಲಿ ಸಮುದ್ರ ಮಟ್ಟ6 ಮೀಟರ್‌ ಏರಿಕೆಯಾಗುತ್ತದೆ. ಜೊತೆಗೆ ಸಾವಿರಾರು ವಿಧದ ಪ್ರಾಣಿಗಳು ಮತ್ತು ಸಸ್ಯ ಪ್ರಭೇದಗಳು ಈಗಾಗಲೇ ಕಣ್ಮರೆಯಾಗಿವೆ.

ಇನ್ನೂ ಕೆಲವು ಅಳಿವಿನಂಚಿನಲ್ಲಿವೆ. ಭೂಮಿಯ ಶ್ವಾಸಕೋಶವಾಗಿರುವ ಅಮೆಜಾನ್‌ ಕಾಡುಗಳೂ ದಿನೇ ದಿನೇ ವಿನಾಶದ ಅಂಚು ತಲುಪುತ್ತಿವೆ. ನಿರಂತರವಾಗಿ ಜಾಗತಿಕ ತಾಪಮಾನ ಏರಿಕೆಯಾಗುವುದರಿಂದ ದೊಡ್ಡ ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು, ಆಹಾರ ಉತ್ಪನ್ನಗಳ ಉತ್ಪಾದನೆಯಲ್ಲಿ ಬದಲಾವಣೆಗಳಾಬಹುದು, ಬರ, ನೆರೆ, ಪ್ರವಾಹ, ಬಿರುಗಾಳಿಯಂತಹ ನೈಸರ್ಗಿಕ ವಿಕೋಪಗಳು ಉಂಟಾಗಿ ಸಾವಿನ ಪ್ರಮಾಣ ಅಧಿಕವಾಗಬಹುದು.

ವಿಜ್ಞಾನಿಗಳ ಪ್ರಕಾರ ತಾಪಮಾನ ಏರಿಕೆಯಿಂದ ಅಕಾಲಿಕವಾಗಿ ಅಗಾಧ ಪ್ರಮಾಣದ ಮಳೆ ಸುರಿಯಬಹುದು. ಆದರೆ ಅದರಿಂದ ಅಷ್ಟೇ ಪ್ರಮಾಣದ ಬರವೂ ಅಪ್ಪಳಿಸುತ್ತದೆ. ಶ್ರೀಮಂತ ರಾಷ್ಟ್ರಗಳಿಗಿಂತ ಬಡ ರಾಷ್ಟ್ರಗಳು ನಿಸರ್ಗದ ವೇಗಗತಿಯ ಬದಲಾವಣೆಯಿಂದ ಅತಿ ಹೆಚ್ಚು ನೋವು ಅನುಭವಿಸುತ್ತವೆ. ಶ್ರೀಮಂತ ದೇಶಗಳು ವೈಜ್ಞಾನಿಕ ಉಪಕರಣ, ಮತ್ತಿತರೆ ಮುಂಜಾಗೃತಾ ಕ್ರಮಗಳಿಂದ ಅಲ್ಪಮಟ್ಟಿಗೆ ಪಾರಾಗಬಹುದು.

Follow Us:
Download App:
  • android
  • ios