ಡಿಜಿಟಲ್ ವ್ಯವಹಾರಗಳಿಗೆ ಇನ್ನು ಮುಂದೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲಾಗುತ್ತದೆ. ಅಂಡ್ರಾಯ್ಡ್ ಮೊಬೈಲ್ ಬಳಕೆದಾರರು ಆನ್ ಲೈನ್ ವ್ಯವಹಾರ ನಡೆಸುವಾಗ ಆಧಾರ್ ಸಂಖ್ಯೆಯನ್ನು ನೀಡಬೇಕಾಗುತ್ತದೆ. ದೃಢೀಕರಣಕ್ಕಾಗಿ ಬೆರಳಚ್ಚು ನೀಡಬೇಕಾಗುತ್ತದೆ ಎಂದು ಯುಐಡಿಎಐ ನಿರ್ದೇಶಕ ಅಜಯ್ ಪಾಂಡೆ ಹೇಳಿದ್ದಾರೆ.

ನವದೆಹಲಿ (ಡಿ.01): ದೇಶದಲ್ಲಿ ನಗದು ರಹಿತ ಆರ್ಥಿಕತೆ ನಿರ್ಮಾಣ ಮಾಡಲು, ಕಾರ್ಡ್ ಗಳ ಬಳಕೆ ಹೆಚ್ಚಾಗಿಸಲು ಪ್ರಧಾನಿ ಮೋದಿಯವರು ಕರೆಕೊಟ್ಟಿದ್ದು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಡಿಜಿಟಲ್ ವ್ಯವಹಾರಗಳಿಗೆ ಇನ್ನು ಮುಂದೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲಾಗುತ್ತದೆ. ಅಂಡ್ರಾಯ್ಡ್ ಮೊಬೈಲ್ ಬಳಕೆದಾರರು ಆನ್ ಲೈನ್ ವ್ಯವಹಾರ ನಡೆಸುವಾಗ ಆಧಾರ್ ಸಂಖ್ಯೆಯನ್ನು ನೀಡಬೇಕಾಗುತ್ತದೆ. ದೃಢೀಕರಣಕ್ಕಾಗಿ ಬೆರಳಚ್ಚು ನೀಡಬೇಕಾಗುತ್ತದೆ ಎಂದು ಯುಐಡಿಎಐ ನಿರ್ದೇಶಕ ಅಜಯ್ ಪಾಂಡೆ ಹೇಳಿದ್ದಾರೆ.

ಇದು ಸುದೀರ್ಘವಾದ ಪ್ರಕ್ರಿಯೆಯಾಗಿದ್ದು ಮೊಬೈಲ್ ತಯಾರಕರು, ವ್ಯಾಪಾರಿಗಳು, ಬ್ಯಾಂಕ್ ಜೊತೆ ಮಾತುಕತೆ ನಡೆಸಬೇಕಿದೆ. ಇದನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಕೆಲಸ ಪ್ರಾರಂಭಿಸಿದೆ ಎಂದು ಪಾಂಡೆ ತಿಳಿಸಿದ್ದಾರೆ.