ನವದೆಹಲಿ: ಜನರ ಮನೆ ಬಾಗಿಲಿಗೇ 40 ವಿವಿಧ ರೀತಿಯ ಸೇವೆ ಒದಗಿಸುವ ವಿಶೇಷ ಯೋಜನೆಯೊಂದು ಸೋಮವಾರದಿಂದ ದೆಹಲಿಯಲ್ಲಿ ಜಾರಿಗೆ ಬರುತ್ತಿದೆ. ಭ್ರಷ್ಟಾಚಾರ ತಡೆಗೆ ಆಪ್ ಸರ್ಕಾರ ಜಾರಿಗೊಳಿಸು ತ್ತಿರು ವ ಈ ಯೋಜನೆ ವಿಶ್ವದಲ್ಲೇ ಮೊದಲು ಎನ್ನಲಾಗಿದೆ. 

ಯೋಜನೆ ಹೇಗೆ?: ಈ ಸೇವೆಯನ್ನು ಪಡೆಯಲು ನಾಗರಿಕರು 50 ರು. ಹೆಚ್ಚುವರಿ ಶುಲ್ಕ ಪಾವತಿಸಬೇಕು. ಜಾತಿ ಪ್ರಮಾಣ ಪತ್ರ, ಹೊಸ ನೀರು ಸಂಪರ್ಕ, ಆದಾಯ, ಡ್ರೈವಿಂಗ್ ಲೈಸೆನ್ಸ್, ವಾಸ ದೃಢೀಕರಣ, ಮದುವೆ ನೋಂದಣಿ, ಆರ್‌ಸಿ ಪ್ರತಿ, ಆರ್‌ಸಿಯಲ್ಲಿ ವಿಳಾಸ ಬದಲಾವಣೆ ಮುಂತಾದ ವಿವಿಧ ಪ್ರಮಾಣ ಪತ್ರ ಪೂರೈಸಲಾಗುತ್ತದೆ. ಇದಕ್ಕಾಗಿ ಸಂಚಾರಿ ಸಹಾಯಕರನ್ನು ನಿಯೋಜಿಸಲಾಗುವುದು, ಅವರು ಕಾಲ್
ಸೆಂಟರ್‌ಗಳನ್ನು ತೆರೆದು ಸೇವೆ ಒದಗಿಸಲಿದ್ದಾರೆ.

ಡ್ರೈವಿಂಗ್ ಲೈಸೆನ್ಸ್ ಬೇಕಾಗಿ ದ್ದಲ್ಲಿ ನಿಗದಿತ ಕಾಲ್‌ಸೆಂಟರ್ ಗೆ ಕರೆ ಮಾಡಿ ವಿವರ ನೀಡಿದರಾಯಿತು. ಆ ಕಾಲ್ ಸೆಂಟರ್ ಅವರಿಗೆ ಸೇವೆ ಒದಗಿಸಲು ಸಂಚಾರಿ ಸಹಾಯಕರನ್ನು ನಿಯೋಜಿಸುತ್ತದೆ. ಅವರು ಕರೆ ಮಾಡಿದವರ ಮನೆಗೆ ತಲುಪಿ, ಅಗತ್ಯ ದಾಖಲೆ ಮತ್ತು ವಿವರಗಳನ್ನು ಸಂಗ್ರಹಿಸುತ್ತಾರೆ. ಅರ್ಜಿದಾರರು ಡ್ರೈವಿಂಗ್ ಪರೀಕ್ಷೆಗೆ ಒಮ್ಮೆ ಡಿಎಲ್ ವಿತರಿಸುವ ಕಚೇರಿಗೆ ಹೋಗಿಬಂದರೆ ಸಾಕು. ನಂತರ ಡ್ರೈವಿಂಗ್ ಲೈಸೆನ್ಸ್ ಮನೆಗೇ ಬರುತ್ತದೆ.