Asianet Suvarna News Asianet Suvarna News

ಬೆಂಗಳೂರಿನ ರಾಮ ವಿಗ್ರಹ ಅಯೋಧ್ಯೆಯಲ್ಲಿ ಅನಾವರಣ!

ಬೆಂಗಳೂರಿನ ಶ್ರೀರಾಮ ಮೂರ್ತಿ ಅಯೋಧ್ಯೆಯಲ್ಲಿ ಅನಾವರಣ| ಅಯೋಧ್ಯಾ ಸಂಶೋಧನಾ ಸಂಸ್ಥೆಯಲ್ಲಿ ಪ್ರತಿಷ್ಠಾಪನೆ| ಸಿಎಂ ಯೋಗಿ ಆದಿತ್ಯನಾಥ್‌ರಿಂದ ಲೋಕಾರ್ಪಣೆ| ಕಾವೇರಿ ಎಂಪೋರಿಯಂನಲ್ಲಿ ಖರೀದಿಸಲಾದ ವಿಗ್ರಹ

Yogi Adityanath unveils 7 ft tall rosewood statue of Lord Ram made in bangalore in Ayodhya
Author
Bangalore, First Published Jun 8, 2019, 9:30 AM IST

ಅಯೋಧ್ಯೆ[ಜೂ.08]: ಬೆಂಗಳೂರಿನಲ್ಲಿರುವ ಸರ್ಕಾರಿ ಸ್ವಾಮ್ಯದ ಕಾವೇರಿ ಎಂಪೋರಿಯಂನಲ್ಲಿ ಖರೀದಿಸಲಾದ ಶ್ರೀರಾಮ ಚಂದ್ರನ ವಿಗ್ರಹವನ್ನು ಅಯೋಧ್ಯೆ ಸಂಶೋಧನಾ ಸಂಸ್ಥೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಶುಕ್ರವಾರ ಅನಾವರಣಗೊಳಿಸಿದ್ದಾರೆ.

35 ಲಕ್ಷ ರು. ಮೌಲ್ಯದ ಈ ವಿಗ್ರಹ 7 ಅಡಿ ಎತ್ತರವಿದೆ. ತೇಗದ ಮರದಲ್ಲಿ ಕೆತ್ತಲಾಗಿದೆ. ರಾವಣನನ್ನು ಕೊಲ್ಲಲು ಬಳಸಿದ್ದ ಕೋದಂಡ ಬಿಲ್ಲನ್ನು ಶ್ರೀರಾಮ ಹಿಡಿದು ನಿಂತಿರುವ ಭಂಗಿಯ ಮೂರ್ತಿ ಇದಾಗಿದೆ.

ಬೆಂಗಳೂರಿನ ಕಾವೇರಿ ಎಂಪೋರಿಯಂನಲ್ಲಿ ಈ ಭಂಗಿಯ ಮೂರ್ತಿ ನೋಡಿದ್ದೆವು. ಅದೇ ರೀತಿಯ ಮೂರ್ತಿ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದೆವು. ಮೂರು ವರ್ಷಗಳ ಬಳಿಕ ಈ ಮೂರ್ತಿ ಸಿದ್ಧವಾಗಿದೆ ಎಂದು ಅಯೋಧ್ಯೆ ಸಂಶೋಧನಾ ಸಂಸ್ಥೆಯ ಆಡಳಿತಾಧಿಕಾರಿ ರಾಮ ತೀರಥ್‌ ಅವರು ತಿಳಿಸಿದ್ದಾರೆ. ರಾಷ್ಟ್ರಪತಿಗಳಿಂದ ಪ್ರಶಸ್ತಿ ಪುರಸ್ಕೃತ ಎಚ್‌. ಮೂರ್ತಿ ಅವರು ಈ ಮೂರ್ತಿಯನ್ನು ಕೆತ್ತಿಕೊಟ್ಟಿದ್ದಾರೆ.

Follow Us:
Download App:
  • android
  • ios