ತಾಜ್’ಮಹಲ್ ಕುರಿತು ಬಿಜೆಪಿ ಶಾಸಕ ಸಂಗೀತ್ ಸೋಮ್ ಹೇಳಿಕೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ತಾಜ್’ಮಹಲನ್ನು ಭಾರತೀಯ ಕಾರ್ಮಿಕರ ರಕ್ತ ಮತ್ತು ಬೆವರಿನಿಂದ ನಿರ್ಮಿಸಲಾಗಿದೆ ಎಂದು ಯೋಗಿ ಹೇಳಿದ್ದಾರೆ.

ನವದೆಹಲಿ (ಅ.17): ತಾಜ್’ಮಹಲ್ ಕುರಿತು ಬಿಜೆಪಿ ಶಾಸಕ ಸಂಗೀತ್ ಸೋಮ್ ಹೇಳಿಕೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ತಾಜ್’ಮಹಲನ್ನು ಭಾರತೀಯ ಕಾರ್ಮಿಕರ ರಕ್ತ ಮತ್ತು ಬೆವರಿನಿಂದ ನಿರ್ಮಿಸಲಾಗಿದೆ ಎಂದು ಯೋಗಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಾಜ್’ಮಹಲನ್ನು ಯಾರು ಕಟ್ಟಿದರು? ಯಾವ ಕಾರಣಕ್ಕಾಗಿ ಕಟ್ಟಿದರು ಎನ್ನುವುದೆಲ್ಲಾ ವಿಚಾರವಲ್ಲ. ಇದನ್ನು ಭಾರತೀಯ ಕಾರ್ಮಿಕರ ರಕ್ತ ಹಾಗೂ ಬೆವರಿನ ಶ್ರಮವಿದೆ ಎಂದು ಯೋಗಿ ಹೇಳಿದ್ದಾರೆ.

ಪ್ರವಾಸೋದ್ಯಮ ದೃಷ್ಟಿಯಿಂದ ತಾಜ್’ಮಹಲ್ ಪ್ರಮುಖ ಆಕರ್ಷಣೀಯ ಕೇಂದ್ರ. ಅಲ್ಲಿಗೆ ಬರುವ ಪ್ರವಾಸಿಗರಿಗೆ ಭದ್ರತೆ ಮತ್ತು ಸಕಲ ಸೌಲಭ್ಯ ನೀಡಲು ನಮ್ಮ ಸರ್ಕಾರ ಆದ್ಯತೆ ನೀಡಿದೆ ಎಂದು ಹೇಳಿದ್ದಾರೆ.

ಇದೇ ತಿಂಗಳ 25 ರಂದು ಯೋಗಿ ಆದಿತ್ಯನಾಥ್ ಆಗ್ರಾಗೆ ಭೇಟಿ ನೀಡಲಿದ್ದು ತಾಜ್’ಮಹಲ್’ಗೂ ಭೇಟಿ ನೀಡಲಿದ್ದಾರೆ.