ಯೋಗೇಶ್ ಗೌಡ ಹತ್ಯೆ ಪ್ರಕರದಲ್ಲಿ  ಅವರ  ಪತ್ನಿ ಮಲ್ಲಮ್ಮ  ಯೂಟರ್ನ್ ಹೊಡೆದಿದ್ದಾರೆ.   ಕಳೆದ 14 ದಿನಗಳಿಂದ ನಾಪತ್ತೆಯಾಗಿದ್ದ ಮಲ್ಲಮ್ಮ ಇಂದು ದಿಢೀರ್ ಪ್ರತ್ಯಕ್ಷರಾಗಿದ್ದಾರೆ.  ಸುವರ್ಣ ನ್ಯೂಸ್ ವರದಿ ನೋಡಿ ಮಲ್ಲಮ್ಮ  ಬೆಂಗಳೂರಿಗೆ ಧಾವಿಸಿದ್ದಾರೆ.

ಬೆಂಗಳೂರು (ಡಿ.16): ಯೋಗೇಶ್ ಗೌಡ ಹತ್ಯೆ ಪ್ರಕರದಲ್ಲಿ  ಅವರ  ಪತ್ನಿ ಮಲ್ಲಮ್ಮ  ಯೂಟರ್ನ್ ಹೊಡೆದಿದ್ದಾರೆ.   ಕಳೆದ 14 ದಿನಗಳಿಂದ ನಾಪತ್ತೆಯಾಗಿದ್ದ ಮಲ್ಲಮ್ಮ ಇಂದು ದಿಢೀರ್ ಪ್ರತ್ಯಕ್ಷರಾಗಿದ್ದಾರೆ.  ಸುವರ್ಣ ನ್ಯೂಸ್ ವರದಿ ನೋಡಿ ಮಲ್ಲಮ್ಮ  ಬೆಂಗಳೂರಿಗೆ ಧಾವಿಸಿದ್ದಾರೆ.

ಕಾಂಗ್ರೆಸ್ ಹುನ್ನಾರದ ಬಗ್ಗೆ ನಿನ್ನೆ ಸುವರ್ಣ  ನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ​ ಸುವರ್ಣ ನ್ಯೂಸ್​ ವರದಿ ಬಳಿಕ ಕಾಂಗ್ರೆಸ್​ ಸೇರ್ಪಡೆ ಬಗ್ಗೆ ಮಲ್ಲಮ್ಮ  ಬಾಯ್ಬಿಟ್ಟಿದ್ದಾರೆ.  

ನನ್ನ ವಿರುದ್ಧ ಇಡೀ ಕುಟುಂಬ ಇಲ್ಲಸಲ್ಲದ ಆರೋಪ ಮಾಡುತ್ತಿದೆ.  ನನ್ನನ್ನು ಕಾಂಗ್ರೆಸ್ ಮುಖಂಡರು ಹೈಜಾಕ್​ ಮಾಡಿಲ್ಲ.  ನನ್ನ ಸ್ವಂತ ಇಚ್ಚೆಯಂತೆ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ.  ಸಿಎಂ ಸಿದ್ದರಾಮಯ್ಯ ನನ್ನ ತಂದೆ ಇದ್ದಂತೆ ಎಂದು ಯೂ ಟರ್ನ್ ಹೊಡೆದಿದ್ದಾರೆ. ಕುಟುಂಬದ ವಿರುದ್ಧ ಮಲ್ಲಮ್ಮ  ತಿರುಗಿ ಬಿದ್ದಿದ್ದಾರೆ.  ಕುಟುಂಬದ ಸದಸ್ಯರ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ತನ್ನ ಗಂಡ ಯೋಗೇಶ್ ಗೌಡ ಕೊಲೆಯಲ್ಲಿ ವಿನಯ್ ಕುಲಕರ್ಣಿ ಕೈವಾಡವಿದೆ ಎಂದು ಅಂದು ಮಲ್ಲಮ್ಮ  ಆರೋಪಿಸಿದ್ದರು. ಯೋಗೇಶ್ ಗೌಡ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದರು. ಕೇವಲ ಒಂದು ತಿಂಗಳ ಅವಧಿಯಲ್ಲಿ ಮಲ್ಲಮ್ಮ ಉಲ್ಟಾ ಹೊಡೆದಿದ್ದಾರೆ. ಪ್ರಭಾವಿ ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಮಲ್ಲಮ್ಮ ಮಣಿದರಾ ಎಂಬ ಪ್ರಶ್ನೆ ಉದ್ಭವವಾಗುತ್ತಿದೆ.