2018ರ ಏಪ್ರಿಲ್'ನಲ್ಲಿ ದೇಶಾದ್ಯಂತ 250 ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.
ನವದೆಹಲಿ(ಆ.03): ಯೋಗ ಸಾಧನೆಯ ಜೊತೆ ಪತಾಂಜಲಿ ಆಯುರ್ವೇದ ಆಹಾರ ಉತ್ಪನ್ನಗಳೊಂದಿಗೆ ದೇಶದಲ್ಲಿಯೇ ಖ್ಯಾತಿ ಪಡೆದಿರುವ ಯೋಗಗುರು ರಾಮ್'ದೇವ್ ಸ್ವದೇಶಿ ಬಟ್ಟೆ ಉದ್ಯಮಕ್ಕೆ ಕಾಲಿಡುತ್ತಿದ್ದಾರೆ.
ಬಾಬಾ ರಾಮ್'ದೇವ್ ಪತಾಂಜಲಿ ಆಯುರ್ವೇದ ಲಿ. ಪುರುಷರು, ಮಹಿಳೆಯರು ಹಾಗೂ ಮಕ್ಕಳ ಬಟ್ಟೆಗಳನ್ನು ಉತ್ಪಾದಿಸಲಿದ್ದು 2018ರ ಏಪ್ರಿಲ್'ನಿಂದ ಕಾರ್ಯಾರಂಭಿಸಲಿದೆ. ಈ ಜವಳಿ ಉದ್ಯಮದಲ್ಲಿ ಮೊದಲ ವರ್ಷದಲ್ಲಿಯೇ5 ಸಾವಿರ ಕೋಟಿ ಮಾರಾಟ ಗುರಿಯನ್ನು ಹೊಂದಿದೆ
ಆಧುನಿಕ ಉಡುಪುಗಳು ಸೇರಿದಂತೆ ವಿವಿಧ ರೀತಿಯ ಬಟ್ಟೆಗಳನ್ನು ಉತ್ಪಾದಿಸಿ ಮಾರಾಟ ಮಾಡಲಿದ್ದು, ಗುಣಮಟ್ಟದ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ನೀಡಲಾಗುತ್ತದೆ. ವಿದೇಶಿ ಕಂಪನಿಗಳು ನೀಡುತ್ತಿರುವ ಉತ್ಪನ್ನಗಳಂತೆಯೇ ಉಡುಪುಗಳನ್ನು ಪತಾಂಜಲಿ ಸಂಸ್ಥೆ ತಯಾರಿಸಲಿದೆ'.
2018ರ ಏಪ್ರಿಲ್'ನಲ್ಲಿ ದೇಶಾದ್ಯಂತ 250 ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಬಿಗ್ ಬಜಾರ್ ಮಳಿಗೆಗಳಲ್ಲೂ ಹಾಗೂ ಖಾದಿಮತ್ತು ಗ್ರಾಮೋದ್ಯೋಗ ಕೇಂದ್ರಗಳಲ್ಲೂ ಸಂಸ್ಥೆಯ ಉಡುಪುಗಳು ಲಭ್ಯವಿರುತ್ತದೆ. ಕಂಪನಿಯ ಪ್ರಮುಖ ಉದ್ದೇಶ ಸ್ವದೇಶಿ ಉತ್ಪನ್ನಗಳನ್ನು ದೇಶದಾದ್ಯಂತ ವಿಸ್ತರಿಸುವುದಾಗಿದೆ. ಮುಂದಿನ ದಿನಗಳಲ್ಲಿ ಮಾಂಸಾಹಾರ ಉದ್ಯಮಕ್ಕೂ ಕಾಲಿಡುವ ಯೋಜನೆಯಲ್ಲಿದೆ.
