ಎಂಸಿಡಿ ಚುನಾವಣೆಯಲ್ಲಿ ಭಾರೀ ಅಂತರದಲ್ಲಿ ಸೋಲನ್ನು ಕಂಡ ಆಮ್ ಆದ್ಮಿ ಪಕ್ಷ ಸೋಲನ್ನು ಒಪ್ಪಿಕೊಂಡಿದೆ. ಪಕ್ಷದ ಸಂಚಾಲಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೋಲಿನ ಪರಾಮರ್ಶೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.
ನವದೆಹಲಿ (ಏ.29): ಎಂಸಿಡಿ ಚುನಾವಣೆಯಲ್ಲಿ ಭಾರೀ ಅಂತರದಲ್ಲಿ ಸೋಲನ್ನು ಕಂಡ ಆಮ್ ಆದ್ಮಿ ಪಕ್ಷ ಸೋಲನ್ನು ಒಪ್ಪಿಕೊಂಡಿದೆ. ಪಕ್ಷದ ಸಂಚಾಲಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೋಲಿನ ಪರಾಮರ್ಶೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.
ನಾವು ತಪ್ಪನ್ನು ಮಾಡಿದ್ದೇವೆ. ಅದನ್ನು ನಾವು ಪರಾಮರ್ಶಿಸುತ್ತೇವೆ. ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ನಾವು ಬದ್ಧರಾಗಿರುತ್ತೇವೆ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಅಗತ್ಯವಿದೆ ಎಂದು ಕೇಜ್ರಿವಾಲ್ ಹೇಳಿದರು.
ಪಕ್ಷದ ಸೋಲಿಗೆ ಎಂದಿನಂತೆ ಇವಿಎಂ, ಪ್ರತಿಪಕ್ಷಗಳು ಪಿತೂರಿ ನಡೆಸಿದ್ದಾರೆ ಎಂದು ಯಾರನ್ನೂ ದೂರದೇ ತಮ್ಮ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ.
ಗೋವಾ, ಪಂಜಾಬ್ ಹಾಗೂ ದೆಹಲಿಯಲ್ಲಿ ಆಪ್ ಸತತ ಸೋಲನುಭವಿಸಿದ ನಂತರ ಪಕ್ಷದ ಸದಸ್ಯರು, ರಾಜಕೀಯ ಪಂಡಿತರು ಸೋಲಿಗೆ ಕೇಜ್ರಿವಾಲೇ ಕಾರಣ ಎಂದು ದೂಷಿಸಿದ್ದರು.
