Asianet Suvarna News Asianet Suvarna News

BSY ಸಚಿವ ಸಂಪುಟ ವಿಸ್ತರಣೆಗೆ ವಿಳಂಬ ಏಕೆ?: ಕಾರಣ ಕೊಟ್ಟ ಬಿಜೆಪಿ ಶಾಸಕ

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ವಾರವೇ ಕಳೆದಿದೆ. ಆದ್ರೆ ಇದುವರೆಗೂ ಸಚಿವ ಸಂಪುಟ ವಿಸ್ತರಣೆಯಾಗಿಲ್ಲ. ಇದಕ್ಕೆ ಪ್ರಮುಖ ಕಾರಣವೂ ಇದೆ. ಹಾಗಾದ್ರೆ ಆ ಕಾರಣವೇನು..? ಬಿಜೆಪಿ ಶಾಸಕ ಕೊಟ್ಟ ಉತ್ತರ ಇಲ್ಲಿದೆ.

BJP MLA Govind Karjol Gives reason Why BSY cabinet expansion delay
Author
Bengaluru, First Published Aug 5, 2019, 3:55 PM IST

ಬೆಂಗಳೂರು, (ಆ.05):  ಸಿಎಂ ಯಡಿಯೂರಪ್ಪ ಅವರ ಸಚಿವ ಸಂಪುಟ ವಿಸ್ತರಣೆಯಾಗಿಲ್ಲ ಏಕೆ? ಎನ್ನುವುದಕ್ಕೆ ಬಿಜೆಪಿ ಶಾಸಕ ಗೋವಿಂದ ಕಾರಜೋಳ ಅವರು ಕಾರಣ ತಿಳಿಸಿದ್ದಾರೆ. 

ಇಂದು (ಸೋಮವಾರ) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಬಿಜೆಪಿ ರಾಜ್ಯಾಧ್ಯಕ್ಷ  ಅಮಿತ್ ಶಾ ಅವರು ಜಮ್ಮುಮತ್ತು ಕಾಶ್ಮೀರಕ್ಕಿರುವ ಆರ್ಟಿಕಲ್ 370 ರದ್ದು ಮಾಡುವ ವಿಚಾರದಲ್ಲಿ ಬ್ಯುಸಿ ಆಗಿದ್ದರು. ಹೀಗಾಗಿ ಇಲ್ಲಿ ಸಂಪುಟ ವಿಸ್ತರಣೆ ತಡವಾಗಿದೆ ಎಂದು ಸ್ಪಷ್ಟಪಡಿಸಿದರು.

'ಬಿಎಸ್‌ವೈಗೆ ಸಿಎಂ ಆಗೋ ಅರ್ಜೆಂಟ್‌ ಇತ್ತು, ಸಂಪುಟ ವಿಸ್ತರಣೆಗೆ ಇಂಟ್ರೆಸ್ಟ್ ಇಲ್ಲ'

ಸಂಪುಟ ವಿಸ್ತರಣೆ ಆಗಲಿಲ್ಲ ಎಂದು ವಿರೋಧಿಗಳು ಕೂಗಾಡ್ತಾ ಇದ್ದಾರೆ.  ಆದ್ರೆ ನಮಗೆ ಒಬ್ಬರನ್ನು ಮಂತ್ರಿ ಮಾಡಿ ಕೂರಿಸೋದಷ್ಟೆ ಮುಖ್ಯ ಅಲ್ಲ. ನಮಗೆ ದೇಶದ ಜವಬ್ದಾರಿ ಮುಖ್ಯ ಎಂದು ಹೇಳಿದರು.

ಯಡಿಯೂರಪ್ಪ ಅವರು ಮೊದಲೇ  ಬೆಳಗ್ಗೆ 4 ಗಂಟೆ ಬಳಿಕ ನಿದ್ದೆ ಮಾಡ್ತಾ ಇರಲಿಲ್ಲ. ಈಗಂತೂ ಸಿಎಂ ಆಗಿದಾಗಿನಿಂದ ಅತೀ ಉತ್ಸಾಹದಿಂದ ಕೆಲಸ ಮಾಡ್ತಿದ್ದಾರೆ. ಭ್ರಷ್ಟಾಚಾರರಹಿತ, ಸ್ವಜನಪಕ್ಷಪಾತ ಇಲ್ಲದ ಸರ್ಕಾರ ನಾವ್ ಕೊಡುತ್ತೇವೆ. ಆ ವಿಶ್ವಾಸ ನಿಮಗೆ ಇರಲಿ ಎಂದರು.

ರಾಷ್ಟ್ರೀಯ ಪಕ್ಷಗಳಿಗೆ ಹೈಕಮಾಂಡ್ ಇರುತ್ತೆ. ಈ ಹಿನ್ನೆಲೆಯಲ್ಲಿ ಆಯಾ ರಾಜ್ಯದಲ್ಲಿ ಏನೇ ಕೆಲಸ ಮಾಡಬೇಕೆಂದರೆ ಹೈಕಮಾಂಡ್ ಒಪ್ಪಿಗೆ ಅನಿವಾರ್ಯ ಆಗಿರುತ್ತದೆ. ಅದರಂತೆ ಈಗ ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಲು  ತಮ್ಮ ಹೈಕಮಾಂಡ್ ಒಪ್ಪಿಗೆಗೆ ಕಾಯುತ್ತಿದ್ದಾರೆ.

Follow Us:
Download App:
  • android
  • ios