ಈ ವರ್ಷದ ನಿಮ್ಮ ರಾಶಿ ಭವಿಷ್ಯ ಹೇಗಿದೆ..??

ಮೇಷ:

ಸ್ಥಿರಾಸ್ತಿಯಿಂದ ಲಾಭ

ಈ ವರ್ಷ ನಿಮಗೆ ಆದಿ ಭಾಗದಲ್ಲಿ ಸಪ್ತಮದ ಗುರು ಸಾಂಸಾರಿಕ ಜೀವನದಲ್ಲಿ ಶುಭವನ್ನುಂಟು ಮಾಡುತ್ತಾನೆ. ನವಮ ಭಾವದ ಶನಿಯು ಬಂಧುಗಳಲ್ಲಿ ವೈಮನಸ್ಸು, ಧಾರ್ಮಿಕ ಕಾರ್ಯದಲ್ಲಿ ತೊಡಕನ್ನುಂಟು ಮಾಡುತ್ತಾನೆ. ಚತುರ್ಥ ರಾಹು ತಾಯಿಯ ಆರೋಗ್ಯದಲ್ಲಿ ಹಾನಿಯನ್ನುಂಟು ಮಾಡುತ್ತಾನೆ. ದಶಮದ ಕೇತು ಸ್ಥಿರಾಸ್ತಿಯಿಂದ ಈ ವರ್ಷ ಲಾಭವನ್ನುಂಟು ಮಾಡುತ್ತಾನೆ. ಅದೃಷ್ಟ ಸಂಖ್ಯೆ 6 ಮತ್ತು 9 ಈ ವರ್ಷ ಶಿವನ ಮತ್ತು ಆಂಜನೇಯನ ಆರಾಧನೆಯಿಂದ ‘ಶುಭಂ.’

ವೃಷಭ

ಪ್ರೇಮಿಗಳಿಗೆ ಮೋಸ!

ಈ ವರ್ಷ ನಿಮಗೆ ಷಷ್ಠದ ಗುರುವಾದ್ದರಿಂದ ಸಾಲಮುಕ್ತರಾಗುವ ಯೋಗ. ಆದರೂ ಸಹ ಮಾನಸಿಕ ಕಿರಿಕಿರಿ. ಮಿತ್ರರೂ ಶತ್ರುಗಳಾದಾರೂ ಜಾಗ್ರತೆ. ಅಷ್ಟಮದ ಶನಿಯು ವ್ಯಾವಹಾರಿಕವಾಗಿ ನಷ್ಟವನ್ನುಂಟು ಮಾಡುತ್ತಾನೆ. ಆರೋಗ್ಯ ಹಾನಿ, ಅಪಘಾತಾದಿ ಭಯ. ನಿರಂತರವಾದ ಪ್ರಯಾಣ, ಪ್ರೇಮಿಗಳ ಜೀವನದಲ್ಲಿ ಮೋಸವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದೃಷ್ಟ ಸಂಖ್ಯೆ 6 ಮತ್ತು 8 ಮಹಾಲಕ್ಷ್ಮಿ ಅಷ್ಟೋತ್ತರ ಪಾರಾಯಣದಿಂದ ‘ಶುಭಂ.’

ಮಿಥುನ

ಉದ್ಯೋಗ ಸ್ಥಾನಪಲ್ಲಟ

ಈ ವರ್ಷ ನಿಮಗೆ ಪಂಚಮ ಭಾವದ ಗುರು ಸಂಪೂರ್ಣ ದೈವ ಬಲವನ್ನು ನೀಡುತ್ತಾನೆ. ಮನೆಯಲ್ಲಿ ಶುಭ ಕಾರ್ಯ ನೆರವೇರುತ್ತದೆ. ಸಪ್ತಮದ ಶನಿಯಿಂದ ಅಪವಾದದ ಭೀತಿ, ಗುಪ್ತಾಂಗದಲ್ಲಿ ರೋಗ. ಉದ್ಯೋಗದಲ್ಲಿ ಸ್ಥಾನ ಪಲ್ಲಟವಾಗುವ ಸಾಧ್ಯತೆ. ದ್ವಿತೀಯ ರಾಹುವಿನಿಂದ ಉತ್ತಮವಾದ ಅವಕಾಶದಿಂದ ವಂಚಿತರಾಗುವ ಸಾಧ್ಯತೆ. ಶುಭ ಸಂಖ್ಯೆ 5, 2, 6 ಮತ್ತು 3 ದೇವತಾರಾಧನೆ- ಗಣಪತಿ, ದುರ್ಗಾ ಪೂಜೆಯಿಂದ ‘ಶುಭಂ.’

ಕರ್ಕಾಟಕ

ವಿದೇಶ ಪ್ರವಾಸ ಯೋಗ

ಈ ವರ್ಷ ನಿಮಗೆ ಚತುರ್ಥ ಗುರುವು ವಿದೇಶ ಪ್ರವಾಸದ ಯೋಗವನ್ನು ಕೊಡುತ್ತಾನೆ. ಬಂಧುಗಳಲ್ಲಿ ಮನಸ್ತಾಪ. ಷಷ್ಠದ ಶನಿಯಿಂದಾಗಿ ಸಾಲಮುಕ್ತರಾಗಲು ಹರಸಾಹಸ. ಜನ್ಮಸ್ಥನಾದ ರಾಹುವು ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಸೋಲನ್ನು ನೀಡುತ್ತಾನೆ. ಸಪ್ತಮದ ಕೇತುವಿನಿಂದ ಪ್ರೇತ ಬಾಧೆಯಿಂದ ಬರುವಂತಹ ದುಷ್ಪರಿಣಾಮ ಅನುಭವಿಸಲಿದ್ದೀರಿ. ಶುಭ ಸಂಖ್ಯೆ 2, 7, 1 ಮತ್ತು 4 ಶಿವ, ಗಣಪತಿ ಆರಾಧನೆಯಿಂದ ‘ಶುಭಂ.’

ಸಿಂಹ

ಶತ್ರುಗಳ ಬಗ್ಗೆ ಜಾಗ್ರತೆ

ಈ ವರ್ಷ ನಿಮಗೆ ತೃತೀಯ ಭಾವದ ಗುರುವಿನಿಂದಾಗಿ ಸಹೋದರ ಸಹೋದರಿಯರ ಸಹಾಯ ಸಿಗಲಿದೆ. ಪಂಚಮದ ಶನಿಯು ಮಕ್ಕಳಿಂದ ಕಿರಿಕಿರಿ ಉಂಟುಮಾಡಿಸುತ್ತಾನೆ. ಧನಹಾನಿ ಸಾಧ್ಯತೆ. ನವದಂಪತಿಗಳಿಗೆ ಸಂತಾನ ಯೋಗವಿಲ್ಲ. ದ್ವಾದಶದ ರಾಹುವಿನಿಂದ ನಿಮಗೆ ಈ ವರ್ಷ ಹೆಚ್ಚಾಗಿ ಶತ್ರುಗಳು ಹುಟ್ಟಿಕೊಳ್ಳುತ್ತಾರೆ ಜಾಗ್ರತೆ. ಶುಭ ಸಂಖ್ಯೆ 1, 5 ಮತ್ತು 9 ದೇವತಾರಾಧನೆ- ಸೂರ್ಯನಾರಾಯಣ ಪೂಜೆಯಿಂದ ‘ಶುಭಂ.’

ಕನ್ಯಾ

ಆಸ್ತಿ ಖರೀದಿ ಯೋಗ

ಈ ವರ್ಷ ನಿಮಗೆ ದ್ವಿತೀಯದ ಗುರುವು ಸಂಪೂರ್ಣ ದೈವ ಬಲವನ್ನು ನೀಡುತ್ತಾನೆ. ಆರೋಗ್ಯ ಸುಧಾರಿಸುತ್ತದೆ. ಆಸ್ತಿ ಖರೀದಿಯ ಯೋಗ. ಕೆಲಸ ಕಾರ್ಯದಲ್ಲಿ ಜಯ. ಚತುರ್ಥದ ಶನಿಯು ಕುಟುಂಬದಲ್ಲಿ ಕೆಲವು ಆರ್ಥಿಕ ತೊಂದರೆ ಉಂಟುಮಾಡುತ್ತಾನೆ. ದಶಮದ ರಾಹುವಿನಿಂದಾಗಿ ಆರೋಗ್ಯದಲ್ಲಿ ಚೇತರಿಕೆ. ಜನರ ಸ್ನೇಹವನ್ನು ಗಳಿಸುವಿರಿ.ಶುಭ ಸಂಖ್ಯೆ 2, 3, 5, 6 ಮತ್ತು 7 ದೇವತಾರಾಧನೆ- ಸುಬ್ರಹ್ಮಣ್ಯ ಪೂಜೆಯಿಂದ ‘ಶುಭಂ.’

ತುಲಾ

ಉದ್ಯೋಗದಲ್ಲಿ ಉನ್ನತ ಸ್ಥಾನ

ಈ ವರ್ಷ ನಿಮಗೆ ತೃತೀಯ ಭಾವದ ಶನಿಯಿಂದ ಕುಟುಂಬದವರೇ ನಿಮಗೆ ಶತ್ರುಗಳಾದಾರು ಜಾಗ್ರತೆ. ಕೋರ್ಟು, ಕಚೇರಿಯಲ್ಲಿ (ವ್ಯಾಜ್ಯ) ಸೋಲನ್ನು ಅನುಭವಿಸುವ ಸಾಧ್ಯತೆಯಿದೆ. ದೃಷ್ಟಿ ದೋಷದಿಂದ ಹೀಗಾಗಬಹುದು. ದಶಮದ ರಾಹುವಿನಿಂದ ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೇರುತ್ತೀರಿ. ಚತುರ್ಥದ ಕೇತುವು ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ. ಶುಭ ಸಂಖ್ಯೆ 4, 6, 7 ಮತ್ತು 9 ದೇವತಾರಾಧನೆ - ಲಕ್ಷ್ಮಿ, ಅಯ್ಯಪ್ಪ ಪೂಜೆಯಿಂದ ‘ಶುಭಂ.’

ವೃಶ್ಚಿಕ

ವರ್ಷಾಂತ್ಯದಲ್ಲಿ ಸುಖ

ಈ ವರ್ಷ ನಿಮಗೆ ದ್ವಾದಶ ಭಾವದ ಗುರುವು ಆದಾಯಕ್ಕಿಂತ ಖರ್ಚನ್ನೇ ಹೆಚ್ಚಾಗಿಸುತ್ತಾನೆ. ಮಾನಸಿಕ ಚಿಂತೆ, ಶಾರೀರಿಕ ತೊಂದರೆ ಉಂಟಾಗಬಹುದು. ದ್ವಿತೀಯ ಶನಿಯು ವಿದೇಶ ಪ್ರಯಾಣದ ಯೋಗ ತರಬಹುದು. ಆದರೆ, ಕೆಲ ಕಾರ್ಯಗಳಲ್ಲಿ ಆತ್ಮೀಯರಿಂದಲೇ ವಿರೋಧ ಬರಬಹುದು. ತೃತೀಯದ ಕೇತುವಿನಿಂದ ಆಪ್ತರ ಸಹಾಯ ಸಾಧ್ಯತೆ. ವರ್ಷಾಂತ್ಯದಲ್ಲಿ ಸೌಖ್ಯ. ಅದೃಷ್ಟ ಸಂಖ್ಯೆ 3, 7 ಮತ್ತು 9. ದೇವತಾರಾಧನೆ- ಗೌರಿ, ಅಂಬಿಕೆಯರ ಪೂಜೆಯಿಂದ ‘ಶುಭಂ.’

ಧನಸ್ಸು

ದುಡಿಮೆ, ಖರ್ಚು ಜಾಸ್ತಿ

ನಿಮಗೆ ಈ ವರ್ಷ ಏಕಾದಶದ ಗುರುವು ಅತ್ಯಂತ ಶುಭವನ್ನುಂಟು ಮಾಡುತ್ತಾನೆ. ಗೌರವ, ಪ್ರತಿಷ್ಠೆ, ಸನ್ಮಾನ ದೊರೆಯಲಿದೆ. ಆಸ್ತಿಗಳಿಂದ ಲಾಭ. ಕುಟುಂಬದಲ್ಲಿ ನೆಮ್ಮದಿ. ಜನ್ಮಶನಿಯು ಸ್ವಜನರಿಂದಲೇ ವಿರೋಧ ಉಂಟುಮಾಡುತ್ತಾನೆ. ಮಾನಹಾನಿ, ಧನಹಾನಿ, ಅಪಘಾತ ಭಯ. ಅಷ್ಟಮದ ರಾಹುವಿನಿಂದ ಅನಿರೀಕ್ಷಿತ ತೊಂದರೆ. ವರ್ಷಾಂತ್ಯದಲ್ಲಿ ಆದಾಯ, ದುಡಿಮೆ-ಖರ್ಚು ಜಾಸ್ತಿ. ಶುಭ ಸಂಖ್ಯೆ 1, 3, 4 ಮತ್ತು 5 ಅದೃಷ್ಟ ದೇವತೆ - ವೆಂಕಟೇಶ್ವರನ ಪೂಜೆಯಿಂದ ‘ಶುಭಂ.’

ಮಕರ

ರಾಹುವಿನಿಂದ ತೊಂದರೆ

ಈ ವರ್ಷ ನಿಮಗೆ ದಶಮದ ಗುರುವು ಮಿಶ್ರ ಫಲವನ್ನು ನೀಡುತ್ತಾನೆ. ಉನ್ನತ ವ್ಯಾಸಂಗಕ್ಕೆ ವಿದೇಶ ಪ್ರಯಾಣದ ಯೋಗ. ಅನಾರೋಗ್ಯದ ಬಾಧೆ. ದ್ವಾದಶ ಭಾವದ ಶನಿಯು ಭಾಗ್ಯ ಹಾನಿಯನ್ನುಂಟು ಮಾಡುತ್ತಾನೆ. ಅನವಶ್ಯಕ ತಿರುಗಾಟ. ಗಂಡ- ಹೆಂಡಿರಲ್ಲಿ ವಿರಸ. ಜನ್ಮಸ್ಥನಾದ ಕೇತುವಿನಿಂದ ಪಿತ್ರಾರ್ಜಿತ ಆಸ್ತಿ ಕೈತಪ್ಪುವ ಸಾಧ್ಯತೆ. ಶುಭ ಸಂಖ್ಯೆ ೬, ೭ ಮತ್ತು ೮ ಅದೃಷ್ಟ ದೇವತೆ- ಶನೈಶ್ಚರ, ಶಿವನ ಆರಾಧನೆಯಿಂದ ‘ಶುಭಂ.’

ಕುಂಭ

ಭೂಮಿ ವ್ಯವಹಾರದಲ್ಲಿ ಎಚ್ಚರ

ನಿಮಗೆ ಈ ವರ್ಷ ನವಮದ ಗುರುವಿನಿಂದ ಕೆಲಸ ಕಾರ್ಯದಲ್ಲಿ ಜಯ. ಆಸ್ತಿ ಖರೀದಿಯ ಯೋಗ. ಆರೋಗ್ಯದಲ್ಲಿ ಚೇತರಿಕೆ. ಪ್ರತಿಭಾನ್ವಿತರಿಗೆ ಸದವಕಾಶ. ವಿವಿಧ ಮೂಲಗಳಿಂದ ಧನಾಗಮನ. ಸರ್ವ ಶತ್ರುಗಳನ್ನು ಜಯಿಸುವಿರಿ. ಷಷ್ಠದ ರಾಹುವಿನ ಪರಿಣಾಮದಿಂದ ಉದ್ಯೋಗದಲ್ಲಿ ಬಡ್ತಿ. ಭೂ ವ್ಯವಹಾರದಲ್ಲಿ ಎಚ್ಚರ. ಶುಭ ಸಂಖ್ಯೆ 3, 4, 6 ಮತ್ತು 8 ಅದೃಷ್ಟ ದೇವತೆ - ಗೋಪಾಲಕೃಷ್ಣ ಮತ್ತು ಅಂಬಿಕೆಯ ಆರಾಧನೆಯಿಂದ ‘ಶುಭಂ.’

ಮೀನ

ಚಟಗಳ ಬಗ್ಗೆ ಹುಷಾರು!

ಈ ವರ್ಷ ನಿಮಗೆ ಅಷ್ಟಮದ ಗುರುವಿನಿಂದ ವಾಹನ ಅಪಘಾತದ ಭಯ, ಅನಾರೋಗ್ಯ. ದಶಮದ ಶನಿಯಿಂದ ದುರ್ವ್ಯಸನಗಳಲ್ಲಿ ಆಸಕ್ತಿ ಹೆಚ್ಚುವ ಸಾಧ್ಯತೆ. ಪಂಚಮದ ರಾಹುವಿನಿಂದ ಉನ್ನತವಾದ ವ್ಯಾಸಂಗಕ್ಕೆ ಗಟ್ಟಿ ಮನಸ್ಸು ಪ್ರೇರೇಪಿಸಲ್ಪಡುತ್ತದೆ. ಮಾನಸಿಕ ಗೊಂದಲ. ವರ್ಷಾಂತ್ಯದಲ್ಲಿ ಸೌಖ್ಯ ಪ್ರಾಪ್ತವಾಗಲಿದೆ. ಶುಭ ಸಂಖ್ಯೆ 3, 5, 2, 7 ಮತ್ತು 9 ದೇವತಾರಾಧನೆ - ಗಣಪತಿ ಮತ್ತು ವಿಷ್ಣು ಆರಾಧನೆಯಿಂದ ‘ಶುಭಂ.’