ಹೈದರಾಬಾದ್`ನ ಅವಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಯಾಸಿನ್ ಭಟ್ಕಳ್ ಮತ್ತು ಆತನ ನಾಲ್ವರು ಸಹಚರರಿಗೆ ಗಲ್ಲು ಶಿಕ್ಷೆ ವಿಧಿಸಿ ಎನ್`ಐಎ ಕೋರ್ಟ್ ತೀರ್ಪು ನೀಡಿದೆ. ಅಸಾದುಲ್ಲಾ ಅಕ್ತರ್, ವಕಾಸ್, ಮೋನು, ಅಸಾದುಲ್ಲಾ ಅಕ್ತರ್ ಅಲಿಯಾಸ್ ಹಡ್ಡಿ, ಜಿಯಾ ಉರ್ ರೆಹಮಾನ್ ಅಲಿಯಾಸ್ ವಖಾಸ್, ತಹಸೀನ್ ಅಖ್ತರ್, ಅಜೀಜ್ ಶೇಕ್, ಯಾಸಿನ್ ಭಟ್ಕಳ್`ಗೆ ಮರಣ ದಂಡನೆ ವಿಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ, ಇಂಡಿಯನ್ ಮುಜಾಹಿದ್ದೀನ್ ಸಂಸ್ಥಾಪಕ ರಿಯಾಜ್ ಭಟ್ಕಳ್ ತಲೆಮರೆಸಿಕೊಂಡಿದ್ದಾನೆ.
ಹೈದರಾಬಾದ್(ಡಿ.19): ಹೈದರಾಬಾದ್`ನ ಅವಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಯಾಸಿನ್ ಭಟ್ಕಳ್ ಮತ್ತು ಆತನ ನಾಲ್ವರು ಸಹಚರರಿಗೆ ಗಲ್ಲು ಶಿಕ್ಷೆ ವಿಧಿಸಿ ಎನ್`ಐಎ ಕೋರ್ಟ್ ತೀರ್ಪು ನೀಡಿದೆ. ಅಸಾದುಲ್ಲಾ ಅಕ್ತರ್, ವಕಾಸ್, ಮೋನು, ಅಸಾದುಲ್ಲಾ ಅಕ್ತರ್ ಅಲಿಯಾಸ್ ಹಡ್ಡಿ, ಜಿಯಾ ಉರ್ ರೆಹಮಾನ್ ಅಲಿಯಾಸ್ ವಖಾಸ್, ತಹಸೀನ್ ಅಖ್ತರ್, ಅಜೀಜ್ ಶೇಕ್, ಯಾಸಿನ್ ಭಟ್ಕಳ್`ಗೆ ಮರಣ ದಂಡನೆ ವಿಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ, ಇಂಡಿಯನ್ ಮುಜಾಹಿದ್ದೀನ್ ಸಂಸ್ಥಾಪಕ ರಿಯಾಜ್ ಭಟ್ಕಳ್ ತಲೆಮರೆಸಿಕೊಂಡಿದ್ದಾನೆ.
2013ರ ಫೆಬ್ರವರಿ 21ರಂದು ದಿಲ್`ಸುಖ್ ನಗರದಲ್ಲಿ ಅವಳಿ ಬಾಂಬ್ ಸ್ಫೋಟ ನಡೆಸಿದ್ದರು.ಬಾಂಬ್ ಸ್ಫೋಟದಲ್ಲಿ 18 ಮಂದಿ ಮೃತಪಟ್ಟು, 119 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ 157 ಮಂದಿಯಿಂದ ಸಾಕ್ಷಿ ಪಡೆದಿತ್ತು.
