ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪತ್ನಿ ತ್ರಿಷಿಕಾ ಕುಮಾರಿ ಅವರು ಭಾನುವಾರ ಮಧ್ಯಾಹ್ನ ಬೆಂಗಳೂರಿನಿಂದ ಶತಾಬ್ದಿ ರೈಲಿನಲ್ಲಿ ನಗರಕ್ಕೆ ಆಗಮಿಸಿದರು.

ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪತ್ನಿ ತ್ರಿಷಿಕಾ ಕುಮಾರಿ ಅವರು ಭಾನುವಾರ ಮಧ್ಯಾಹ್ನ ಬೆಂಗಳೂರಿನಿಂದ ಶತಾಬ್ದಿ ರೈಲಿನಲ್ಲಿ ನಗರಕ್ಕೆ ಆಗಮಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಾರಾಣಿ ರೈಲಿನಲ್ಲಿ ಪ್ರಯಾಣಿಸುತ್ತಿರುವುದನ್ನು ಕಂಡು ಪ್ರಯಾಣಿಕರಲ್ಲಿ ಕುತೂಹಲ ಮೂಡಿತು. ಗರ್ಭಿಣಿಯಾಗಿರುವ ಅವರು ಬೆಂಗಳೂರಿನ ಅರಮನೆಯಲ್ಲಿದ್ದು, ರಸ್ತೆ ಪ್ರಯಾಣ ಬೇಡ ಎಂಬ ವೈದ್ಯರ ಸಲಹೆ ಮೇರೆಗೆ ಪತಿ ಯದುವೀರ್ ಅವರೊಂದಿಗೆ ಬೆಳಗ್ಗೆ 11 ಗಂಟೆಗೆ ಹೊರಟು 1.30ಕ್ಕೆ ಮೈಸೂರು ತಲುಪಿದರು.

ಬಳಿಕ ಸಂಜೆ ಅರಮನೆಯಲ್ಲಿ ನಡೆದ ಕೃಷ್ಣ ಪೂಜೆಯಲ್ಲಿ ಪಾಲ್ಗೊಂಡರು. ಸೆ.21ರಿಂದ ದಸರಾ ಮಹೋತ್ಸವ ಹಾಗೂ ರಾಜವಂಶಸ್ಥರ ಖಾಸಗಿ ದರ್ಬಾರ್ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ತ್ರಿಷಿಕಾ ಕುಮಾರಿ ಭಾಗವಹಿಸುವುದು ಅವಶ್ಯವಾಗಿರುವುದರಿಂದ ಗರ್ಭಿಣಿಯಾಗಿದ್ದರೂ ಆಗಮಿಸಿದ್ದಾರೆ. ಅರಮನೆ ಮೂಲಗಳ ಪ್ರಕಾರ ದಸರೆ ಬಳಿಕ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಅವರು ಮಗುವಿಗೆ ಜನ್ಮನೀಡಲಿದ್ದಾರೆ.