Asianet Suvarna News Asianet Suvarna News

ಸರ್ಕಾರಿ ಶಾಲೆಗೆ ತೆರಳಿ ಪಾಠ ಮಾಡಿದ ಯುವರಾಜ

ಮೈಸೂರಿನ ಕುಂಬಾರಕೊಪ್ಪಲಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿಕೊಟ್ಟಿದ್ದ ಅವರು, ಮಕ್ಕಳೊಂದಿಗೆ ಸಂವಾದ ನಡೆಸಿ, ಬುದ್ದಿಮಾತು ಹೇಳಿದರು.

Yaduveer teach lesson
  • Facebook
  • Twitter
  • Whatsapp

ಮೈಸೂರು ಸಂಸ್ಥಾನದ ಉತ್ತರಾಧಿಕಾರಿ ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್​ ಇವತ್ತು ಸರ್ಕಾರಿ ಶಾಲೆಗೆ ತೆರೆಳಿ ಮಕ್ಕಳಿಗೆ ಪಾಠ ಹೇಳಿಕೊಟ್ಟಿದ್ದಾರೆ. ಮೈಸೂರಿನ ಕುಂಬಾರಕೊಪ್ಪಲಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿಕೊಟ್ಟಿದ್ದ ಅವರು, ಮಕ್ಕಳೊಂದಿಗೆ ಸಂವಾದ ನಡೆಸಿ, ಬುದ್ದಿಮಾತು ಹೇಳಿದರು. ಸರ್ಕಾರಿ ಶಾಲೆಗಳನ್ನು ಉಳಿಸುವ ಉದ್ದೇಶದಿಂದ ಮೈಸೂರಿನ ಕಲಿಸು ಫೌಂಢೇಶನ್​ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಯದುವೀರ್​ ಪಾಲ್ಗೊಂಡಿದ್ದರು. ಮಕ್ಕಳೊಂದಿಗೆ ಒಂದು ಗಂಟೆಗೂ ಹೆಚ್ಚುಕಾಲ ಕಳೆದ ಅವರು, ಪರಿಸರ ಕಾಳಜಿ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರು. ಪರಿಸರ ಸಂರಕ್ಷಣೆ ದಿನನಿತ್ಯದ ಕೆಲಸ. ಸುತ್ತಮುತ್ತಲಿದ ಪರಿಸರವನ್ನು ಸುಚಿತ್ವದಿಂದ ಇಟ್ಟುಕೊಳ್ಲುವುದು, ಪ್ಲಾಸ್ಟಿಕ್​ನಿಂದ ಆಗುವ ಹಾನಿಯನ್ನು ಮನಗಂಡು, ಪರಿಸರವನ್ನು ಪ್ಲಾಸ್ಟಿಕ್​ ಮುಕ್ತ ಗೊಳಿಸುವ ಬಗ್ಗೆ ಮಕ್ಕಳಿಗೆ ಹೇಳಿಕೊಟ್ಟರು. ಇದರ ಜೊತೆಗೆ ಮಕ್ಕಳಿಗೆ ಗಣಿತ ಪಾಠವನ್ನು ಯದಿವೀರ್​ ಹೇಳಿಕೊಟ್ಟರು.

Follow Us:
Download App:
  • android
  • ios