ಟೂರಿಸಂ ರಾಯಭಾರಿಯಾಗಿ ಯದುವೀರ್ | ಯದುವೀರ್ ಜೊತೆ ಮಾತುಕತೆ ನಡೆಸಿದ ಸಾ ರಾ ಮಹೇಶ್ | ಇನ್ನೂ ನಿರ್ಧಾರ ತಿಳಿಸಿದ ಯದುವೀರ್ 

ಮೈಸೂರು (ಸೆ. 19):  ಪ್ರವಾಸೋದ್ಯಮ ಇಲಾಖೆಗೆ ಮೈಸೂರು ಭಾಗದ ಬ್ರಾಂಡ್ ಅಂಬಾಸಿಡರ್ ಆಗುವಂತೆ ಯದುವೀರ್ ಜೊತೆ ಪ್ರವಾಸೋದ್ಯಮ ಸಚಿವ ಸಾ ರಾ ಮಹೇಶ್ ಮಾತುಕತೆ ನಡೆಸಿದ್ದಾರೆ.  

ಇಂದು ಮೈಸೂರು ಅರಮನೆಗೆ ಸಾ ರಾ ಮಹೇಶ್ ಭೇಟಿ ನೀಡಿ ಯದುವೀರ್ ಜೊತೆ ಮಾತುಕತೆ ನಡೆಸಿದ್ದಾರೆ.  ಹಳೆ ಮೈಸೂರು ಭಾಗದಲ್ಲಿ ಯದುವೀರ್ ಅವರನ್ನ ಬಳಸಿಕೊಂಡು ಪ್ರಚಾರ ಕೈಗೊಳ್ಳುವ ಚಿಂತನೆ ನಡೆಸಲಾಗಿದೆ. 

ರಾಜ್ಯದ ವಿವಿಧ ಭಾಗಗಳಲ್ಲಿ, ವಿವಿಧ ವ್ಯಕ್ತಿಗಳನ್ನ ರಾಯಭಾರಿಯಾಗಿ ಆಯ್ಕೆ ಮಾಡಲು ಚಿಂತನೆ ನಡೆಸಲಾಗಿದ್ದು ಈ ಹಿನ್ನೆಲೆಯಲ್ಲಿ ಯದುವೀರ್ ಜೊತೆ ಮಾತುಕತೆ ನಡೆಸಿದ್ದಾರೆ.  ಬ್ರಾಂಡ್ ಅಂಬಾಸಿಡರ್ ವಿಚಾರವಾಗಿ ಮಾತುಕತೆ ನಡೆಸಲು ಬಂದಿದ್ದೆ. ಸದ್ಯ ಯದುವೀರ್ ಗೆ ಮನವಿ ಮಾಡಿದ್ದೇವೆ. ಯದುವೀರ್ ಅವರ ನಿರ್ಧಾರವನ್ನು ಸದ್ಯದಲ್ಲೇ ತಿಳಿಸಲಿದ್ದಾರೆ ಎಂದು ಮೈಸೂರು ಅರಮನೆಯಲ್ಲಿ  ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.