Asianet Suvarna News Asianet Suvarna News

ಬಡತನ ನಿವಾರಿಸಲು 34 ಲಕ್ಷ ಬಡವರ ಎತ್ತಂಗಡಿ!

ರಸ್ತೆ, ಶುದ್ಧ ಕುಡಿಯುವ ನೀರು, ವಿದ್ಯುತ್ ಇಲ್ಲದ ಪ್ರದೇಶಗಳಲ್ಲಿ 4.5 ಕೋಟಿ ಬಡವರು ವಾಸಿಸುತ್ತಿದ್ದಾರೆ. ಅಂಥವರನ್ನು ಗುರುತಿಸಿ ವಸತಿ, ಮೂಲಸೌಕರ್ಯ, ಸಾರ್ವಜನಿಕ ಸೇವೆ ಲಭ್ಯವಿರುವಂತಹ ಕಡೆಗೆ ಸ್ಥಳಾಂತರಿಸಲಾಗುತ್ತದೆ.

Xi pledges to remove poverty in China by 2020

ಬೀಜಿಂಗ್(ಫೆ.11): 2020ರೊಳಗೆ ಬಡತನ ನಿರ್ಮೂಲನೆ ಗುರಿ ಹಾಕಿಕೊಂಡಿರುವ ಚೀನಾ, ಈ ವರ್ಷ 34 ಲಕ್ಷ ಬಡವರನ್ನು ಅಭಿವೃದ್ಧಿ ಹೊಂದಿದ ಪ್ರದೇಶಗಳಿಗೆ ಸ್ಥಳಾಂತರಿಸಲು ಮುಂದಾಗಿದೆ. ಬಡತನ ನಿರ್ಮೂಲನೆಗಾಗಿ ಚೀನಾ ಕೈಗೆತ್ತಿಕೊಂಡಿರುವ ಈ ಯೋಜನೆ ಭಾರತದ್ದಕ್ಕಿಂತ ವಿಭಿನ್ನವಾಗಿದೆ ಎಂಬುದು ವಿಶೇಷ.

ರಸ್ತೆ, ಶುದ್ಧ ಕುಡಿಯುವ ನೀರು, ವಿದ್ಯುತ್ ಇಲ್ಲದ ಪ್ರದೇಶಗಳಲ್ಲಿ 4.5 ಕೋಟಿ ಬಡವರು ವಾಸಿಸುತ್ತಿದ್ದಾರೆ. ಅಂಥವರನ್ನು ಗುರುತಿಸಿ ವಸತಿ, ಮೂಲಸೌಕರ್ಯ, ಸಾರ್ವಜನಿಕ ಸೇವೆ ಲಭ್ಯವಿರುವಂತಹ ಕಡೆಗೆ ಸ್ಥಳಾಂತರಿಸಲಾಗುತ್ತದೆ. ಕೈಗಾರಿಕೆ, ಉದ್ಯೋಗ ಹಾಗೂ ಸಾಮಾಜಿಕ ಭದ್ರತೆಯನ್ನು ಸ್ಥಳಾಂತರಗೊಂಡ ಬಡವರಿಗೆ ಒದಗಿಸಲಾಗುತ್ತದೆ. ತನ್ಮೂಲಕ ಅವರನ್ನು ಬಡತನದಿಂದ ಮೇಲಕ್ಕೆತ್ತಲಾಗುತ್ತದೆ.

2016ನೇ ಸಾಲಿನಲ್ಲಿ 24.9 ಲಕ್ಷ ಜನರನ್ನು ಚೀನಾ ಇದೇ ರೀತಿ ಬಡತನದಿಂದ ಹೊರಕ್ಕೆ ತಂದಿತ್ತು. ಬಡವರನ್ನು ಅವರಿರುವ ಪ್ರದೇಶದಿಂದ ಬೇರೆಡೆಗೆ ಸ್ಥಳಾಂತರಿಸುವುದು ಬಡತನ ನಿರ್ಮೂಲನೆಗೆ ಚೀನಾ ಕೈಗೊಂಡಿರುವ ತಂತ್ರಗಾರಿಕೆಯ ಒಂದು ಭಾಗವಾಗಿದೆ.

Follow Us:
Download App:
  • android
  • ios