ಅಮೆರಿಕಾದ ಟೆಕ್ಸಾಸ್'ನ ಹೂಸ್ಟನ್'ನಲ್ಲಿ 1965 ಮಾರ್ಚ್ 24 ರಂದು ಜನಿಸಿದ್ದ ಇವರು ತಮ್ಮ ಪದವಿ ಪೂರ್ಣಗೊಳಿಸಿದ ನಂತರ ವಿಶ್ವದಲ್ಲಿಯೇ ಹೆಚ್ಚು ಪ್ರಸಿದ್ಧಿ ಪಡೆದಿದ್ದ ಹೆವಿವೈಟ್ ಚಾಂಪಿಯನ್'ಷಿಪ್ ರಂಗಕ್ಕೆ ಪಾದರ್ಪಣೆ ಮಾಡಿದ್ದರು.
WWEಕುಸ್ತಿ ಪಟುಗಳಲ್ಲಿ ವಿಶ್ವದಲ್ಲಿಯೇ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದ 52 ವಯಸ್ಸಿನ ದೈತ್ಯ ಕುಸ್ತಿಪಟು ಅಂಡರ್'ಟೇಕರ್ ತಮ್ಮ ಸುದೀರ್ಘ ಕುಸ್ತಿ ಪಯಣದ ನಂತರ ನಿವೃತ್ತಿ ಘೋಷಿಸಿದ್ದಾರೆ.
ಅಂಡರ್'ಟೇಕರ್ ಅವರ ಮೂಲ ಹೆಸರು 'ಮಾರ್ಕ್ ವಿಲಿಯಂ ಕ್ಯಾಲವೆ'. ಅಮೆರಿಕಾದ ಟೆಕ್ಸಾಸ್'ನ ಹೂಸ್ಟನ್'ನಲ್ಲಿ 1965 ಮಾರ್ಚ್ 24 ರಂದು ಜನಿಸಿದ್ದ ಇವರು ತಮ್ಮ ಪದವಿ ಪೂರ್ಣಗೊಳಿಸಿದ ನಂತರ ವಿಶ್ವದಲ್ಲಿಯೇ ಹೆಚ್ಚು ಪ್ರಸಿದ್ಧಿ ಪಡೆದಿದ್ದ ಹೆವಿವೈಟ್ ಚಾಂಪಿಯನ್'ಷಿಪ್ ರಂಗಕ್ಕೆ ಪಾದರ್ಪಣೆ ಮಾಡಿದ್ದರು.
ತಮ್ಮ 33 ವರ್ಷಗಳ ಫೈಟಿಂಗ್ ಪಯಣದಲ್ಲಿ ಹಲವು ಬಾರಿ ಚಾಂಪಿಯನ್ ಆಗಿದ್ದರು. ನೇರ ಕುಸ್ತಿಗೆ ಹೆಸರುವಾಸಿಯಾಗಿದ್ದ ಇವರ ಶೈಲಿಗೆ ಕೋಟ್ಯಂತರ ಕುಸ್ತಿ ರಸಿಕರು ಮಾರು ಹೋಗಿದ್ದರು. 6.10 ಅಡಿ ಇದ್ದ ಈ ಅಜಾನುಬಾಹು ಕುಸ್ತಿ ಅಖಾಡಕ್ಕೆ ಕಾಲಿರಿದರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದರು. ಏ.2 ರಂದು ನಡೆದ ಕುಸ್ತಿ ಪಂದ್ಯದಲ್ಲಿಸೋತ ನಂತರ ನಿವೃತ್ತಿ ಪ್ರಕಟಿಸಿದ್ದಾರೆ.
