ಸುಳ್ಳು ಹೇಳುವವರೊಂದಿಗೆ ನಾವೆಂದಿಗೂ ಸೇರುವುದಿಲ್ಲ : ಚಂದ್ರಬಾಬು ನಾಯ್ಡು

First Published 30, Mar 2018, 12:56 PM IST
Wouldve won 15 more seats if TDP hadnt allied with liar BJP AP CM
Highlights

ಈಗಾಗಲೇ ಎನ್’ಡಿಎಯೊಂದಿಗೆ ಟಿಡಿಪಿ ಮೈತ್ರಿ ಮುರಿದು ಬಿದ್ದಿದ್ದು,  ಈ ಬಗ್ಗೆ ಇದೀಗ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು  ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೈದ್ರಾಬಾದ್ : ಈಗಾಗಲೇ ಎನ್’ಡಿಎಯೊಂದಿಗೆ ಟಿಡಿಪಿ ಮೈತ್ರಿ ಮುರಿದು ಬಿದ್ದಿದ್ದು,  ಈ ಬಗ್ಗೆ ಇದೀಗ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು  ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದೀಗ ಯಾವುದೇ ಕಾರಣಕ್ಕೂ  ಮಾಜಿಯವರಂದಿಗೆ ಕೈ ಜೋಡಿಸುವುದಿಲ್ಲ ಎದು ಹೇಳಿದ್ದಾರೆ. ಅಲ್ಲದೇ  ತಾವು 15ಕ್ಕೂ ಹೆಚ್ಚು ಸೀಟ್’ಗಳನ್ನು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಹಿಂದೆ ಬಿಜೆಪಿಯೊಂದಿಗೆ ನಾವು ಕೈ ಜೋಡಿಸಿದ್ದೆವು. ಇದರಲ್ಲಿ ಯಾವುದೇ ರೀತಿಯಾದ ರಾಜಕೀಯ ಉದ್ದೇಶವಿರಲಿಲ್ಲ. ಅಭಿವೃದ್ಧಿಯನ್ನು ಸಾಧಿಸುವುದು ಮಾತ್ರವೇ ನಮ್ಮ ಗುರಿಯಾಗಿತ್ತು.

ವಿಶೇಷ ಸ್ಥಾನಮಾನವನ್ನು ನೀಡುವುದಾಗಿ ಕೇಂದ್ರ ಸರ್ಕಾರ ಮೋಸ ಮಾಡಿದೆ ಎಂದು ಅವರು ಈ ವೇಳೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸುಳ್ಳು ಮಾತ್ರ ಪ್ರಚಾರ ಮಾಡುತ್ತದೆ ಎಂದು ಅವರು ಹೇಳಿಕೆ ನೀಡಿದ್ದಾರೆ.

ನಮಗೆ ಈ ಬಗ್ಗೆ ಭರವಸೆ ನೀಡಿದ್ದ ಕೇಂದ್ರ ಸರ್ಕಾರ  ಈಗ ಮಾತ್ರ ಈಶಾನ್ಯ ರಾಜ್ಯಗಳತ್ತ ಹೆಚ್ಚು ಗಮನ ಹರಿಸುತ್ತಿದೆ ಎಂದು ಅವರು ಹೇಳಿದ್ದಾರೆ. ನಮ್ಮ ಭರವಸೆ ಈಡೇರದ ಕಾರಣದಿಂದ ನಾವು ಬಿಜೆಪಿಯನ್ನು ತೊರೆದು ಹೊರಬರಬೇಕಾಯಿತು ಎಂದು ಹೇಳಿದರು.

loader