ನ್ಯೂಯಾರ್ಕ್(ಸೆ.27): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬ್ರಿಟನ್‌ನ ದಿವಂಗತ ರಾಜಕುಮಾರಿ ಡಯಾನಾ ಜೊತೆ, ಲೈಂಗಿಕ ಸಂಪರ್ಕ ಹೊಂದಲು ಬಯಸಿದ್ದರೆಂಬ ಮಾಹಿತಿ ಬಹಿರಂಗವಾಗಿದೆ. ಆಕೆಯನ್ನು ಆಗಿನ ಕಾಲದಲ್ಲಿ ಜಗತ್ತಿನಲ್ಲೇ ಮೂರನೇ ಅತಿ ಸುಂದರಿ ಎಂದು ಟ್ರಂಪ್ ಭಾವಿಸಿದ್ದರಂತೆ.

1997 ರಲ್ಲಿ ನೀಡಿರುವ ಸರಣಿ ರೇಡಿಯೊ ಸಂದರ್ಶನದಲ್ಲಿ ಟ್ರಂಪ್ ಮುಕ್ತವಾಗಿ ತಮ್ಮ ಭಾವನೆ ಗಳನ್ನು ಹಂಚಿಕೊಂಡಿದ್ದಾರೆ ಎಂದು ಈಗ ಗೊತ್ತಾಗಿದೆ. ಯಾವುದೇ ಮುಜುಗರವಿಲ್ಲದೆ ರಾಜಕುಮಾರಿ ಡಯಾನಾ ಜೊತೆ ಲೈಂಗಿಕ ಸಂಪರ್ಕ ಹೊಂದಲು ಸಿದ್ಧನಿದ್ದೆ ಎಂದು ಟ್ರಂಪ್ ಹೇಳಿದ್ದರು.