ಬೆಂಗಳೂರು[ಮೇ 01]  ಪತ್ರಿಕೆಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗ ಅಥವಾ ಆಯಾಮ ಎಂದೇ ಪರಿಗಣಿಸಲಾಗುತ್ತದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಷ್ಟೇ ಅಥವಾ ಅದಕ್ಕಿಂತಲೂ ಪ್ರಬಲವಾದ ಶಕ್ತಿ ಪತ್ರಿಕೋದ್ಯಮಕ್ಕೆ ಇದೆ ಎನ್ನುವುದು ಹಲವಾರು ಸಾರಿ ಸಾಬೀತಾಗಿದೆ.

ಕನ್ನಡಪ್ರಭ, ಸುವರ್ಣ ನ್ಯೂಸ್, ಕರ್ನಾಟಕ ಪತ್ರಕರ್ತೆಯರ ಸಂಘ, ದಿ ಯುಎಸ್ ಕನ್ಸಲ್ಟೆಂಟ್ ಜನರಲ್ ಚೆನ್ನೈ ಸಹಯೋಗದಲ್ಲಿ  ‘ಮಾಧ್ಯಮಗಳ ಮೂಲಕ ಸತ್ಯಾನ್ವೇಷಣೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾಗರಿಕನ ಪಾತ್ರ’ ಎಂಬ ವಿಷಯದ ಮೇಲೆ ಸಂವಾದ ಏರ್ಪಡಿಸಲಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಕನ್ನಡ ಮಾಧ್ಯಮ ಲೋಕದಲ್ಲಿ ಮೊದಲು ಎಂಬಂತೆ ವೆಬ್ ಚಾಟ್ ಮೂಲಕ ಸಂವಾದ ನಡೆಯಲಿದೆ.

ಕನ್ನಡ್ರಭ ಯುಗಾದಿ ವಿಶೇಷಾಂಕದ ರಸಗವಳ

ಶಿವಾನಂದ ಸರ್ಕಲ್ ಸಮೀಪದ ಕ್ರೆಸೆಂಟ್ ರಸ್ತೆಯ ಕನ್ನಡಪ್ರಭ ಪ್ರಧಾನ ಕಚೇರಿಯಲ್ಲಿ ಸಂಜೆ 5.30 ರಿಂದ 7.30ರವರೆಗೆ ಕಾರ್ಯಕ್ರಮ ನಡೆಯಲಿದೆ. ಸುವರ್ಣ ನ್ಯೂಸ್ .ಕಾಂ ಪ್ರಧಾನ ಸಂಪಾದಕ ಎಸ್.ಕೆ.ಶಾಮಸುಂದರ್ ಸಂವಾದದ ನಿರ್ವಹಣೆ ನೋಡಿಕೊಳ್ಳಲಿದ್ದಾರೆ.

ವೆಬ್ ಚಾಟ್ ನಲ್ಲಿ ನಮ್ಮೊಂದಿಗೆ: ಚುನಾವಣಾ ವರದಿಗಾರಿಕೆ ಮತ್ತು ಪತ್ರಿಕೋದ್ಯಮದ ತರಬೇತಿ ವಿಭಾಗದಲ್ಲಿ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರವಾಗಿರುವ ಲೂಸಿಂಡಾ ಫ್ಲೆಸನ್ ಮತ್ತು ಪ್ರಪಂಚದ ರೆಡಿಯೋ ಲೋಕದಲ್ಲೇ ಹೆಸರು ಮಾಡಿರುವ ಪೀಟರ್ ಕ್ಲೋಟೆಯ್ ಇರಲಿದ್ದಾರೆ.

ಭಾಗವಹಿಸುವವರು: ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹೆಸರು ಮಾಡಿರುವ ವಿಜಯಮ್ಮ, ಪೂರ್ಣಿಮಾ, ಗಾಯತ್ರಿ ಚಂದ್ರಶೇಖರ್, ಸಿ.ಜಿ.ಮಂಜುಳಾ, ಗಾಯತ್ರಿ ನಿವಾಸ್, ಆಶಾ ಕೃಷ್ಣಮೂರ್ತಿ. ಸಾವಿತ್ರಿ.ಕೆ.ಎಚ್., ಪ್ರತಿಮಾ ನಂದಕುಮಾರ್, ಮಾಲತಿ, ಶಾಂತಲಾ, ಮಂಜುಶ್ರೀ ರವೀಂದ್ರ ಭಟ್, ಸಂಧ್ಯಾ ರಾಣಿ, ಲಾವಣ್ಯಾ ಪ್ರದೀಪ್, ನಿವೇದಿತಾ, ಶ್ರೀಜಾ, ಸುಚೇತನಾ ನಾಯ್ಕ್, ಭಾವನಾ, ಶಾಮ್, ಆಶಾ ಕೃಷ್ಣಸ್ವಾಮಿ, ರಶ್ಮಿ ತೆಂಡೂಲ್ಕರ್ ಪಾಲ್ಗೊಂಡು ಅಭಿಪ್ರಾಯ ಮತ್ತು ಅನಿಸಿಕೆ ಹಂಚಿಕೊಳ್ಳಲಿದ್ದಾರೆ.