ಬೆಂಗಳೂರು :  ಪಾಕಿಸ್ತಾನದ ಹೊಸ ಸರ್ಕಾರ ಭಯೋತ್ಪಾದನೆ ಮುಕ್ತ ದಕ್ಷಿಣ ಏಷ್ಯಾ ನಿರ್ಮಾಣಕ್ಕೆ ಸಹಾಯಕವಾಗಲಿದೆ ಎಂಬ ಭರವಸೆಯಿದೆ ಎಂದು ಭಾರತ ಶನಿವಾರ ವಿಶ್ವಾಸ ವ್ಯಕ್ತಪಡಿಸಿದೆ.

‘ಪಾಕಿಸ್ತಾನದಲ್ಲಿ ನಡೆದಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ- ಇನ್ಸಾಫ್ (ಪಿಟಿಐ) ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. 

ಸುರಕ್ಷತೆ, ಸ್ಥಿರ, ಅಭಿವೃದ್ಧಿಪರ, ಭಯೋತ್ಪಾದನೆ ಮತ್ತು ಹಿಂಸೆ ಮುಕ್ತ ದಕ್ಷಿಣ ಏಷ್ಯಾ ನಿರ್ಮಾಣಕ್ಕೆ ರಚನಾತ್ಮಕವಾಗಿ ಪಾಕಿಸ್ತಾ ನದ ಹೊಸ ಸರ್ಕಾರ ಕಾರ್ಯ ನಿರ್ವಹಿಸಲಿದೆ ಎಂಬ ಭರವಸೆಯಿದೆ. ತನ್ನ ನೆರೆ ರಾಷ್ಟ್ರಗಳೊಂದಿಗೆ ಶಾಂತಿಯಿಂದ, ಸಮೃದ್ಧ ಮತ್ತು ಪ್ರಗತಿಪರ ಪಾಕಿಸ್ತಾನವನ್ನು ಭಾರತ ಬಯಸುತ್ತದೆ’ ಎಂದು ವಿದೇಶಾಂಗ ಸಚಿವಾಲಯದ ಪ್ರಕಟಣೆ ತಿಳಿಸಿದೆ.