ಮದುವೆಯಾದ ಮಹಿಳೆಯರು ಪಾಸ್’ಪೋರ್ಟ್’ನಲ್ಲಿ ಹೆಸರು ಬದಲಾಯಿಸುವ ಅಗತ್ಯವಿಲ್ಲ: ಮೋದಿ

news | 4/13/2017 | 10:36:00 AM
isthiyakh
Suvarna Web Desk
Highlights

ಇಂಡಿಯಾ ಮರ್ಚಂಟ್ಸ್ ಚೇಂಬರ್’ನ ಮಹಿಳಾ ವಿಭಾಗದ ಸದಸ್ಯೆಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮದುವೆಯಾದ ಮಹಿಳೆಯರು ತಮ್ಮ ಹಿಂದಿನ ಹೆಸರನ್ನೇ ಪಾಸ್’ಪೋರ್ಟ್’ನಲ್ಲಿಟ್ಟುಕೊಳ್ಳಬಹುದು ಎಂದಿದ್ದಾರೆ.

ನವದೆಹಲಿ (ಏ. 13): ಮದುವೆಯಾದ ಬಳಿಕ ಮಹಿಳೆಯರು ಪಾಸ್’ಪೋರ್ಟ್’ನಲ್ಲಿ ಹೆಸರು ಬದಲಾಯಿಸುವ ಅಗತ್ಯವಿಲ್ಲವೆಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇಂಡಿಯಾ ಮರ್ಚಂಟ್ಸ್ ಚೇಂಬರ್’ನ ಮಹಿಳಾ ವಿಭಾಗದ ಸದಸ್ಯೆಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮದುವೆಯಾದ ಮಹಿಳೆಯರು ತಮ್ಮ ಹಿಂದಿನ ಹೆಸರನ್ನೇ ಪಾಸ್’ಪೋರ್ಟ್’ನಲ್ಲಿಟ್ಟುಕೊಳ್ಳಬಹುದು ಎಂದಿದ್ದಾರೆ.

ಮಹಿಳೆಯರ ಸಬಲೀಕರಣಕ್ಕೆ ಸರ್ಕಾರವು ಬದ್ಧವಾಗಿದ್ದು,  ಮುದ್ರಾ, ಉಜ್ವಲದಂತಹ ಯೋಜನೆಗಳನ್ನು ಜಾರಿಗೆ ತಂದಿದೆಯೆಂದು ಮೋದಿ ಹೇಳಿದ್ದಾರೆ.

12 ವಾರಗಳ ತಾಯ್ತನ ರಜೆಯನ್ನು 26 ವಾರಗಳಿಗೆ ಹೆಚ್ಚಿಸಿದೆಯೆಲ್ಲದೇ, ಆಸ್ಪತ್ರೆಯಲ್ಲಿ ಹೆರಿಗೆ ಮಾಡಿ ಮಾಡಿಸಿಕೊಳ್ಳುವ ಮಹಿಳೆಯರಿಗೆ ರೂ.6000 ಸರ್ಕಾರ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.

Comments 0
Add Comment