. ಬೆದರಿಕೆ ಕರೆ ಹಿನ್ನಲೆಯಲ್ಲಿ ಸುವರ್ಣ ನ್ಯೂಸ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಲ್ಯಾಂಡ್ ಲೈನ್ ಸಂಖ್ಯೆ ಬೆನ್ನತ್ತಿದ್ದ ಬಸವೇಶ್ವರ ನಗರ ಪೊಲೀಸರು ಕರೆ ಬಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು(ಫೆ.13): ನಗರದಲ್ಲಿ ಕೆಲವು ಕಡೆ ಬಾಂಬ್ ಇಟ್ಟ ಬೆದರಿಕೆ ಕರೆ ಬಂದಿದೆ. ಪ್ರಕಾಶ್ ನಗರದ ಲ್ಯಾಂಡ್'ಲೈನ್'ನಿಂದ ಸುವರ್ಣ ನ್ಯೂಸ್ ಮುಖ್ಯ ಕಚೇರಿಗೆ ಕರೆ ಮಾಡಿದ ಅನಾಮಿಕ ಮಹಿಳೆಯೊಬ್ಬರು 2 ಆಸ್ಪತ್ರೆ, 9 ಶಾಲೆ, 2 ಬಸ್ಸ್ಟ್ಯಾಂಡ್'ನಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಯಾರಿಟ್ಟಿದ್ದಾರೆ ಎಂಬ ಬಗ್ಗೆ ಆ ಮಹಿಳೆ ತಿಳಿಸಲಿಲ್ಲ. ಬೆದರಿಕೆ ಕರೆ ಹಿನ್ನಲೆಯಲ್ಲಿ ಸುವರ್ಣ ನ್ಯೂಸ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಲ್ಯಾಂಡ್ ಲೈನ್ ಸಂಖ್ಯೆ ಬೆನ್ನತ್ತಿದ್ದ ಬಸವೇಶ್ವರ ನಗರ ಪೊಲೀಸರು ಕರೆ ಬಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
