Asianet Suvarna News Asianet Suvarna News

ಫೇಸ್‌ಬುಕ್‌ ಪೋಲಿಗೆ ನಡುರಸ್ತೆಯಲ್ಲಿ ಗೂಸಾ!

ಮೆಡಿಕಲ್ ರೆಪ್ರಸೆಂಟೀವ್​  ಆಗಿ ಕೆಲಸ ಮಾಡುತ್ತಿದ್ದ ಪವನ್ ಎಂಬ ಅಸಾಮಿ ವಿವಿಧ ಕಾರಣಗಳಿಂದ ಹುಡುಗಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಹಾಯ್ ಬಾಯ್ ಮೆಸೇಜ್ ಕಳಸಿ ಕ್ಲೋಸ್ ಆದ ಹುಡುಗಿಯರಿಗೆ ಅಶ್ಲೀಲ ಮೆಸೇಜ್ ಕಳಿಸಿ ಕಿರಿಕಿರಿ ಮಾಡುತ್ತಿದ್ದ ಎನ್ನಲಾಗಿದೆ.

Women Teach Lesson to FB Pervert

ದಾವಣಗೆರೆ (ಡಿ. 01): ಫೇಸ್’ಬುಕ್ ನಲ್ಲಿ ಪರಿಚಯವಾಗಿ ಹುಡುಗಿಯರಿಗೆ ಅಶ್ಲೀಲ ಮೆಸೇಜ್​ ಕಳುಹಿಸುತ್ತಿದ್ದ ಕಾಮುಕನೊಬ್ಬನಿಗೆ ಮಹಿಳೆಯರೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ.

ಮೆಡಿಕಲ್ ರೆಪ್ರಸೆಂಟೀವ್​  ಆಗಿ ಕೆಲಸ ಮಾಡುತ್ತಿದ್ದ ಪವನ್ ಎಂಬ ಅಸಾಮಿ ವಿವಿಧ ಕಾರಣಗಳಿಂದ ಹುಡುಗಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಹಾಯ್ ಬಾಯ್ ಮೆಸೇಜ್ ಕಳಸಿ ಕ್ಲೋಸ್ ಆದ ಹುಡುಗಿಯರಿಗೆ ಅಶ್ಲೀಲ ಮೆಸೇಜ್ ಕಳಿಸಿ ಕಿರಿಕಿರಿ ಮಾಡುತ್ತಿದ್ದ ಎನ್ನಲಾಗಿದೆ.

ಇದರಿಂದ ರೋಸಿ ಹೋದ ಹುಡುಗಿಯೊಬ್ಬಳು ಆಸರೆ NGO ಮಹಿಳಾ ಸಂಘಟನೆಗೆ ದೂರು ನೀಡಿದ್ದಳು. ಇಂದು ನಗರದ ಬೇತೂರು ರಸ್ತೆ ಬಳಿ ಹುಡುಗನನ್ನ ಅಡ್ಡಗಟ್ಟಿ ಕೆರಳಿದ ನಾರಿಯರು,  ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಸದ್ಯ ಆಜಾದ್ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Follow Us:
Download App:
  • android
  • ios