ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕಾದರೆ ಕೊಲೆ ಆಗಬೇಕು ಅಥವಾ ಅತ್ಯಾಚಾರವಾಗಬೇಕು. ಆಗಷ್ಟೆ ಸರ್ಕಾರ ಹಾಗೂ ಸಮಾಜ ನೊಂದವರ ಪರ ನಿಲ್ಲುವುದು. ನನ್ನ ಶಕ್ತಿ ಮೀರಿ ಹೋರಾಡಿದ್ದೇನೆ. ನನ್ನ ಸಾವಿಗೆ ಶಾಸಕ ಶ್ರೀನಿವಾಸ ಮೂರ್ತಿ ಕಾರಣ ಎಂದು ನೋಟ್'ನಲ್ಲಿ ಉಲ್ಲೇಖಿಸಿದ್ದಾರೆ

ನೆಲಮಂಗಲ(ಜ.07): ಶಾಸಕನ ವಿರುದ್ಧ ಪೇಸ್'ಬುಕ್ ನಲ್ಲಿ ಬರೆದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನೆಲಮಂಗಲದಲ್ಲಿ ನಡೆದಿದೆ.

ಶಿವಕುಮಾರಿ ಆತ್ಮಹತ್ಯೆಗೆ ಯತ್ನಿಸಿದವರು. ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಇವರನ್ನು ಪಟ್ಟಣದ ಮ್ಯಾಗ್ನಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇವರು ಮುಂದಿನ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ನೆಲಮಂಗಲ ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹಾಲಿ ಜೆಡಿಎಸ್ ಶಾಸಕ ಶ್ರೀನಿವಾಸ್ ಮೂರ್ತಿ ವಿರುದ್ಧ ಫೇಸ್ ಬುಕ್'ನಲ್ಲಿ ಡೆತ್ ನೋಟ್ ಬರೆದಿಟ್ಟಿರುವ ಶಿವಕುಮಾರಿ,

ಹೆಣ್ಣು ಮಕ್ಕಳ ಬದುಕನ್ನೆ ನಾಶ ಮಾಡಿದ ನೀಚ ಶಾಸಕ ಎಂದು ದೂರಿರುವ ಅವರು ನನ್ನ ಸಾವಿಗೆ ನೆಲಮಂಗಲ ಶಾಸಕ ಶ್ರೀನಿವಾಸಮೂರ್ತಿ ಕಾರಣ ಎಂದು ಉಲ್ಲೇಖಿಸಿದ್ದಾರೆ. ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕಾದರೆ ಕೊಲೆ ಆಗಬೇಕು ಅಥವಾ ಅತ್ಯಾಚಾರವಾಗಬೇಕು. ಆಗಷ್ಟೆ ಸರ್ಕಾರ ಹಾಗೂ ಸಮಾಜ ನೊಂದವರ ಪರ ನಿಲ್ಲುವುದು. ನನ್ನ ಶಕ್ತಿ ಮೀರಿ ಹೋರಾಡಿದ್ದೇನೆ. ನನ್ನ ಸಾವಿಗೆ ಶಾಸಕ ಶ್ರೀನಿವಾಸ ಮೂರ್ತಿ ಕಾರಣ ಎಂದು ನೋಟ್'ನಲ್ಲಿ ಉಲ್ಲೇಖಿಸಿದ್ದಾರೆ. ನೆಲಮಂಗಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.