ಅಗ್ನಿ ಅವಘಡದಲ್ಲಿ ಮನೆ ಸುಟ್ಟು ಹೋಗಿದ್ದರಿಂದ ಇಡೀ ಕುಟುಂಬ ಬೀದಿಗೆ ಬಂದಿತ್ತು. ಹೀಗಾಗಿ, ತನ್ನ ಕುಟುಂಬದ ರಕ್ಷಣೆಗಾಗಿ ಯುವತಿ ಕ್ಯಾಥರಿನ್ ಸ್ಟೋನ್ ಇಂಥದ್ದೊಂದು ನಿರ್ಧಾರಕ್ಕೆ ಬಂದಿದ್ದಾಳೆ.

ರೆನೋ(ಅ.23): 20 ವರ್ಷದ ಯುವತಿಯೊಬ್ಬಳು ತನ್ನ ಮನೆಗೆ ನೆರವು ನೀಡುವುದಕ್ಕಾಗಿ ಕನ್ಯತ್ವ ಮಾರಾಟಕ್ಕಿಟ್ಟಿರುವ ಘಟನೆ ಅಮೆರಿಕದ ರೆನೋ ನಗರದಿಂದ ವರದಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಗ್ನಿ ಅವಘಡದಲ್ಲಿ ಮನೆ ಸುಟ್ಟು ಹೋಗಿದ್ದರಿಂದ ಇಡೀ ಕುಟುಂಬ ಬೀದಿಗೆ ಬಂದಿತ್ತು. ಹೀಗಾಗಿ, ತನ್ನ ಕುಟುಂಬದ ರಕ್ಷಣೆಗಾಗಿ ಯುವತಿ ಕ್ಯಾಥರಿನ್ ಸ್ಟೋನ್ ಇಂಥದ್ದೊಂದು ನಿರ್ಧಾರಕ್ಕೆ ಬಂದಿದ್ದಾಳೆ.

ಈ ಕುರಿತು, ಸಿಎನ್ಎನ್ ಜೊತೆ ಮಾತನಾಡಿರುವ ಯುವತಿ, ಪ್ರೀತಿಗಾಗಿ ಈ ಕೆಲಸ ಮಾಡಬೇಕೆಂದು ಜನ ಹೇಳುತ್ತಾರೆ. ನೀವು ನನ್ನ ಈ ತ್ಯಾಗದ ಬಗ್ಗೆ ಯೋಚಿಸಿ. ನಾನು ನನ್ನ ಕುಟುಂಬವನ್ನ ಪ್ರೀತಿಸುತ್ತೇನೆ ಅದಕ್ಕೆ ಇದನ್ನ ಮಾಡುತ್ತಿರುವುದು' ಎಂದು ಹೇಳಿದ್ದಾಳೆ.

ಸದ್ಯ, ಕ್ಯಾಥರಿನ್ ನೆವಾಡಾದ ಲೀಗಲ್ ಬ್ರಾಥಲ್`ನಲ್ಲಿದ್ದು, ಅಲ್ಲಿಯೇ ಬಿಡ್ಡಿಂಗ್ ಕೂಡ ನಡೆಯುತ್ತಿದೆ. ಅದಾಗಲೇ ಗಿರಾಕಿಗಳು 4 ಲಕ್ಷ ಡಾಲರ್(2.6 ಕೋಟಿ ರೂ.)ಗಳಿಗೆ ಬಿಡ್ ಮಾಡಿದ್ದಾರೆ.

ಕೃಪೆ: ಡೈಲಿ ಮೇಲ್