ಸೋಶಿಯಲ್ ಮಿಡಿಯಾದಲ್ಲಿ ಧೂಳೆಬ್ಬಿಸುತ್ತಿರುವ ಪಾಕ್ ಮಹಿಳಾ ಪೈಲೆಟ್ಸ್ದುರ್ಗಮ ಗಿಲ್ಗಿಟ್ ಪ್ರದೇಶದಲ್ಲಿ ಯಶಸ್ವಿ ವಿಮಾನ ಹಾರಾಟದಮರಿಯಂ ಮಸೂದ್ ಮತ್ತು ಶುಮಾಲಿಯಾ ಮಝರ್ ಸಾಧನೆಮಹಿಳಾ ಪೈಲೆಟ್ ಗಳ ಸಾಧನೆಗೆ ಭಾರೀ ಪ್ರಶಂಸೆ
ಇಸ್ಲಾಮಾಬಾದ್(ಜೂ.22): ಪಾಕಿಸ್ತಾನ್ ಇಂಟರನ್ಯಾಶನಲ್ ಏರಲೈನ್ಸ್ ನ ಇಬ್ಬರು ಮಹಿಳಾ ಪೈಲೆಟ್ ಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಪಾಕಿಸ್ತಾನದ ಅತ್ಯಂತ ದುರ್ಗಮ ವಾಯ ಸಂಚಾರಗಳಲ್ಲಿ ಒಂದಾದ ಗಿಲ್ಗಿಟ್ ಪ್ರದೇಶದಲ್ಲಿ ಯಶಸ್ವಿ ವಿಮಾನ ಹಾರಾಟ ನಡೆಸಿದ ಈ ಮಹಿಳಾ ಪೈಲೆಟ್ ಗಳನ್ನು ದೇಶದ ಗಡಿಗಳನ್ನೂ ಮೀರಿ ಜನ ಅಭಿನಂದಿಸಿದ್ದಾರೆ.
ಪಾಕಿಸ್ತಾನ್ ಏರಲೈನ್ಸ್ ಮಹಿಳಾ ಪೈಲೆಟ್ ಗಳಾದ ಮರಿಯಂ ಮಸೂದ್ ಮತ್ತು ಶುಮಾಲಿಯಾ ಮಝರ್ ದುರ್ಗಮ ವಾಯು ಸಂಚಾರದಲ್ಲಿ ಯಶಸ್ವಿಯಾಗಿ ವಿಮಾನ ಹಾರಾಟ ನಡೆಸಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಪಾಕಿಸ್ತಾನ್ ಏರಲೈನ್ಸ್, ಈ ಮಹಿಳಾ ಪೈಲೆಟ್ ಗಳ ಸಾಧನೆಯನ್ನು ಕೊಂಡಾಡಿದೆ.
ಪಾಕಿಸ್ತಾನ್ ಏರಲೈನ್ಸ್ ಮಾಡಿರುವ ಈ ಟ್ವಿಟ್ ಗೆ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ಭಾರತವೂ ಸೇರಿದಂತೆ ಇತರ ದೇಶಗಳಿಂದಲೂ ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ. ಈ ಮಹಿಳಾ ಪೈಲೆಟ್ ಗಳ ಧಯರ್ಯವನ್ನು ಮೆಚ್ಚಿಕೊಂಡು ಬಹುತೇಕರು ಟ್ವಿಟ್ ಮಾಡಿದ್ದಾರೆ. ದುರ್ಗಮ ಗಿಲ್ಗಿಟ್ ಪ್ರದೇಶದಲ್ಲಿ ಹಾರಾಟ ನಡೆಸಿದ ಅನುಭವ ಹಂಚಿಕೊಂಡಿರುವ ಮಸೂದ್ ಮತ್ತು ಶುಮಾಲಿಯಾ, ವಿಮಾನ ಆ ಪ್ರದೇಶಕ್ಕೆ ಪ್ರವೇಶ ಮಾಡಿದಾಗ ನಾವಿಬ್ಬರೂ ಪರಸ್ಪರರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದೆವು ಎಂದು ಹೇಳಿದ್ದಾರೆ. ಅಲ್ಲದೇ ಮನಸ್ಸನ್ನು ನಿಯಂತ್ರಣದಲ್ಲಿರಿಸಿ ಮಾಡಬೇಕಾದ ಕರ್ತವ್ಯದತ್ತ ಚಿತ್ತ ಹರಿಸಿದ್ದಾಗಿ ಈ ಮಹಿಳಾ ಪೈಲೆಟ್ ಗಳು ಹೇಳಿದ್ದಾರೆ.
