ಕದಂಬ ಬಸ್ ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸನ್ನಿ ಲಿಯೋನ್ ಗರ್ಭ ನಿರೋಧಕ ಜಾಹಿರಾತುಗಳನ್ನು ತೆರವುಗೊಳಿಸಿ. ಮಹಿಳೆಯರಿಗಾಗುವ ಮುಜುಗರವನ್ನು ತಪ್ಪಿಸಿ ಎಂದು ಗಣರಾಗಿಣಿ ಮಹಿಳಾ ಸಂಘಟನೆ ಗೋವಾ ಮಹಿಳಾ ಆಯೋಗಕ್ಕೆ ಮನವಿ ಮಾಡಿದೆ.

ಪಣಜಿ (ಫೆ.28): ಕದಂಬ ಬಸ್ ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸನ್ನಿ ಲಿಯೋನ್ ಗರ್ಭ ನಿರೋಧಕ ಜಾಹಿರಾತುಗಳನ್ನು ತೆರವುಗೊಳಿಸಿ. ಮಹಿಳೆಯರಿಗಾಗುವ ಮುಜುಗರವನ್ನು ತಪ್ಪಿಸಿ ಎಂದು ಗಣರಾಗಿಣಿ ಮಹಿಳಾ ಸಂಘಟನೆ ಗೋವಾ ಮಹಿಳಾ ಆಯೋಗಕ್ಕೆ ಮನವಿ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಿಂದೂ ಜನಜಾಗೃತಿ ಸಮಿತಿಯ ಅಂಗವಾದ ರಣರಾಗಿಣಿ ಮಹಿಳಾ ಸಂಘಟನೆ ಗೋವಾ ಮಹಿಳಾ ಆಯೋಗಕ್ಕೆ ಸನ್ನಿ ಗರ್ಭನಿರೋಧಕ ಜಾಹಿರಾತನ್ನು ಆಕ್ಷೇಪಿಸಿ ಅರ್ಜಿ ಸಲ್ಲಿಸಿದೆ. ಮಹಿಳೆಯನ್ನು ವಸ್ತು ಎಂಬಂತೆ ಬಿಂಬಿಸಿರುವುದು ಮುಜುಗರದ ವಿಚಾರ. ಇದು ಬೇರೆ ರೀತಿಯ ಸಂದೇಶವನ್ನು

ನೀಡುತ್ತದೆ ಹಾಗೂ ಅತ್ಯಂತ ಕೆಟ್ಟ ದೃಶ್ಯವಾಗಿದೆ. ಇದರ ಬಗ್ಗೆ ಸಾಕಷ್ಟು ಮಹಿಳೆಯರು ನಮಗೆ ದೂರು ನೀಡಿದ್ದಾರೆ. ಈ ಜಾಹಿರಾತನ್ನು ತೆಗೆದು ಹಾಕಲು ನಿಮಗೆ ವಿನಂತಿಸುತ್ತೇವೆ ಎಂದು ಅರ್ಜಿದಾರರು ಮಹಿಳಾ ಆಯೋಗಕ್ಕೆ ಹೇಳಿದ್ದಾರೆ.