ಚೆನ್ನೖ (ಮೇ. 09): ಹೆಡ್‌ಫೋನ್ ಹಾಕಿಕೊಂಡು ಹಾಡು ಕೇಳುತ್ತಾ ಮಲಗಿದ್ದ ಮಹಿಳೆಯೋರ್ವಳು ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ಶನಿವಾರ ನಡೆದಿದೆ. ಫಾತಿಮಾ (46) ಮೃತ ಮಹಿಳೆ. 

ಫಾತಿಮಾ ಎಂದಿನಂತೆ ಶನಿವಾರ ರಾತ್ರಿ ಮಲಗುವ ಮುನ್ನ ಹೆಡ್‌ಫೋನ್ ಹಾಕಿಕೊಂಡು ಹಾಡು ಕೇಳುತ್ತಿದ್ದು, ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾರೆ.

ಪತ್ನಿ ಎಚ್ಚರವಾಗದಿದ್ದನ್ನು ಕಂಡು ಪತಿ ಅಬ್ದುಲ್ ಕಲಾಂ ಆಸ್ಪತ್ರೆಗೆ ಕೊಂಡೊಯ್ದಿದ್ದು, ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ್ದಾರೆಂದು ಆಸ್ಪತ್ರೆಯ ವರದಿಯಲ್ಲಿ  ಹೇಳಲಾಗಿದೆ. ಸದ್ಯಸೆಕ್ಷನ್ 174 ಅಡಿಯಲ್ಲಿ (ಅಸ್ವಾಭಾವಿಕಮರಣ) ಎಂದು ಕನತೂರು ಠಾಣೆಯಲ್ಲಿ ದೂರು ದಾಖಲಾಗಿದೆ.