Asianet Suvarna News Asianet Suvarna News

ಶಬರಿಮಲೆ ಸಮೀಪದ ಮಸೀದಿ ಪ್ರವೇಶ: ಅಯ್ಯಪ್ಪ ಮಹಿಳಾ ಭಕ್ತರ ಬಂಧನ!

ಶಬರಿಮಲೆ ಅಯ್ಯಪ್ಪ ದೇವಾಲಯದ ಹಾದಿಯಲ್ಲಿರುವ ಮಸೀದಿ ಪ್ರವೇಶಿಸಲು ಯತ್ನಿಸಿದ 6 ಅಯ್ಯಪ್ಪ ಭಕ್ತರನ್ನು ಬಂಧಿಸಲಾಗಿದೆ.

Women demand entry to mosque with Sabarimala link
Author
Sabarimala, First Published Jan 9, 2019, 8:17 AM IST

ಪಾಲಕ್ಕಾಡ್‌[ಜ.09]: ಶಬರಿಮಲೆ ಅಯ್ಯಪ್ಪ ದೇವಾಲಯದ ಮಾರ್ಗದಲ್ಲಿ ಇರುವ ಪ್ರಸಿದ್ಧ ವಾವರ್‌ ಮಸೀದಿಯ ಗರ್ಭಗೃಹ ಪ್ರವೇಶಿಸಲು ಯತ್ನಿಸಿದ ತಮಿಳುನಾಡಿನ ಹಿಂದು ಮಕ್ಕಳ್‌ ಕಚ್ಚಿ ಸಂಘಟನೆಯ ಮೂವರು ಮಹಿಳೆಯರು ಸೇರಿದಂತೆ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಾವರ್‌ಗೆ ಅಯ್ಯಪ್ಪಸ್ವಾಮಿಯ ಮುಸ್ಲಿಂ ಭಕ್ತ ಎಂಬ ಎಂಬ ಪ್ರತೀತಿಯಿದೆ. ಶಬರಿಮಲೆಗೆ ಹೋಗುವಾಗ ಭಕ್ತರು ಈ ಮಸೀದಿಗೆ ಪ್ರದಕ್ಷಿಣೆ ಹಾಕಿ ಕಾಯಿ ಒಡೆಯುವುದು ಸಂಪ್ರದಾಯ. ಹೀಗಾಗಿ ಇದು ಭಾವೈಕ್ಯತೆಯ ಸಂಕೇತ. ಆದರೆ ಮಸೀದಿಯ ಗರ್ಭಗೃಹದಲ್ಲಿ ಪ್ರವೇಶಿಸಲು ಪುರುಷ ಹಾಗೂ ಮಹಿಳಾ ಭಕ್ತರಿಬ್ಬರಿಗೂ ನಿರ್ಬಂಧವಿದೆ.

ಆದರೆ ತಮಿಳ್ನಾಡಿನ ಕೊಯಮತ್ತೂರು ಭಾಗದಿಂದ ಬಂದಿದ್ದ ಹಿಂದು ಮಕ್ಕಳ್‌ ಕಚ್ಚಿಯ ಈ 6 ಕಾರ್ಯಕರ್ತರು, ‘ಶಮರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶಾವಕಾಶ ಸಿಕ್ಕಿರುವಾಗ ನಾವೇಕೆ ಮಸೀದಿ ಗರ್ಭಗೃಹದಲ್ಲಿ ಪ್ರವೇಶಿಸಬಾರದು?’ ಎಂದು ಪ್ರಶ್ನಿಸಿ ನುಗ್ಗಲು ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಯತ್ನದ ಆರೋಪ ಹೊರಿಸಿ ಈ ಆರೂ ಮಂದಿಯನ್ನು ಬಂಧಿಸಲಾಗಿದೆ.

Follow Us:
Download App:
  • android
  • ios