ನಾನು ಬಹಳ ಪ್ರಭಾವಿ ರಾಜಕಾರಣಿಯಾಗಿದ್ದು ಈ ತರ ಸಾವಿರಾರು ಹುಡುಗಿಯರನ್ನ ಅನುಭವಿಸಿದ್ದೇನೆ. ಯಾವುದಾದರೂ ಹುಡುಗಿ ಇದ್ದರೇ ಹೇಳು. ಇದೆಲ್ಲಾ ನನಗೆ ಇಷ್ಟವಿಲ್ಲದ ಕಾರಣ ನಾನು ಆತನ ವಿರುದ್ದ ದೂರು ಕೊಡುತ್ತಿದ್ದೇನೆ.
ಬೆಂಗಳೂರು(ಫೆ.20): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರೊಬ್ಬರು ಹಲವು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದು, ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ.
2013ರಲ್ಲಿ ಬೆಂಗಳೂರಿನ ಸಿ.ವಿ.ರಾಮನ್ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪಿ.ರಮೇಶ್ ತಾನು ಶಾಸಕ ಎಂದು ಹೇಳಿಕೊಂಡು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ರಾಜಾಜಿನಗರದಲ್ಲಿ ವಾಸವಾಗಿರುವ ನೊಂದ ಮಹಿಳೆ ದೂರು ನೀಡಿದ್ದಾರೆ.
ಯುವತಿ ಕೊಟ್ಟ ದೂರಿನ ಸಾರಾಂಶ ಹೀಗಿದೆ
ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಾಗಿರುವ ನಾನು ವೃತ್ತಿಯಲ್ಲಿ ಟೀಚರ್ ಕೆಲಸ ಮಾಡುತ್ತಿದ್ದೇನೆ. ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ವರ್ಗಾವಣೆಗಾಗಿ ಸರ್ವಜ್ಞ ನಗರದ ಪಿ. ರಮೇಶ್ ಅವರ ಮೊಬೈಲ್ ನಂಬರ್ ..90080...25 ಗೆ ಕರೆ ಮಾಡಿದ್ದೇನೆ. ಒಂದೆರಡು ಬಾರಿ ಭೇಟಿಯಾದ ನಾನು ವರ್ಗಾವಣೆ ಮಾಡಿಕೊಡುತ್ತೇನೆಂದು ನಗರದ ಫಾರ್ಚೂನ್ ಹೋಟೆಲ್'ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ನನಗೆ ಬಲವಂತವಾಗಿ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ.
ನನ್ನ ಜೊತೆ ಸೆಕ್ಸ್ ಇಂಟರ್ ಕೋರ್ಸ್ ಮಾಡಿದ್ದಾರೆ ನನ್ನ ಇಷ್ಟಕ್ಕೆ ವಿರುದ್ಧವಾಗಿ ಅದು ನಡೆದಿದೆ. ಹೀಗೆ ಹಲವಾರು ಬಾರಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ನಾನು ಬಹಳ ಪ್ರಭಾವಿ ರಾಜಕಾರಣಿಯಾಗಿದ್ದು ಈ ತರ ಸಾವಿರಾರು ಹುಡುಗಿಯರನ್ನ ಅನುಭವಿಸಿದ್ದೇನೆ. ಯಾವುದಾದರೂ ಹುಡುಗಿ ಇದ್ದರೇ ಹೇಳು. ಇದೆಲ್ಲಾ ನನಗೆ ಇಷ್ಟವಿಲ್ಲದ ಕಾರಣ ನಾನು ಆತನ ವಿರುದ್ದ ದೂರು ಕೊಡುತ್ತಿದ್ದೇನೆ. 9632.... 72 ,,,,, 9845....77,,,, 9448....61 ಈ ನಂಬರ್ ಗಳಿಂದ ಪಿ.ರಮೇಶ್ ಪೊರ್ನ್ ವಿಡಿಯೋ ಮತ್ತು ಅಶ್ಲೀಲ ಪೋಟೋಗಳನ್ನ ಕಳುಹಿಸುತ್ತಿದ್ದಾರೆ. ಅವರು ಪ್ರಭಾವಿ ರಾಜಕಾರಣಿ ಯಾಗಿರುವುದರಿಂದ ಕಂಪ್ಲೆಂಟ್ ಕೊಡಲು ಹೋದರೆ ಪ್ರಾಣಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಈ ದೂರನ್ನು ನೀಡುತ್ತಿದ್ದಾನೆ. ಪಿ.ರಮೇಶ್ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ
