17 ಗಂಟೆಗಳ ಕಾಲ ಸತತ ಕೆಲಸ ಮಾಡಿದ್ದ 45 ವರ್ಷದ ಕ್ಯಾಷಿಯರ್ ಕೌಂಟರ್`ನಲ್ಲೇ ಕುಸಿದುಬಿದ್ದ ಘಟನೆ ಅಹಮದಾಬಾದ್`ನ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಶನಿವಾರ ನಡೆದಿದೆ.

ಬುಂದೇಲ್ ಖಂಡ್(ನ.20): 500 ಮತ್ತು 1000 ನೋಟುಗಳ ನಿಷೇಧದ ಬಳಿಕ ಬ್ಯಾಂಕ್ ಉದ್ಯೋಗಿಗಳಿಗೆ ಬಿಡುವೇ ಇಲ್ಲದಂತಾಗಿದೆ. ಹಣ ಡೆಪಾಸಿಟ್ ಮತ್ತು ವಿತ್ ಡ್ರಾ ಮಾಡುವವರ ಸಾಲು ಕಡಿಮೆಯಾಗುತ್ತಲೇ ಇಲ್ಲ. ಇದರಿಂದಾಗಿ ಕೆಲ ಸಿಬ್ಬಂದಿ ಕೆಲಸದೊತ್ತಡದಿಂದ ತೀವ್ರ ದಣಿಯುತ್ತಿದ್ದಾರೆ. 17 ಗಂಟೆಗಳ ಕಾಲ ಸತತ ಕೆಲಸ ಮಾಡಿದ್ದ 45 ವರ್ಷದ ಕ್ಯಾಷಿಯರ್ ಕೌಂಟರ್`ನಲ್ಲೇ ಕುಸಿದುಬಿದ್ದ ಘಟನೆ ಅಹಮದಾಬಾದ್`ನ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಶನಿವಾರ ನಡೆದಿದೆ.

ಬಳಿಕ ಕೂಡಲೇ ಕ್ಯಾಷಿಯರ್ ಅನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.