ಭೂಮಾತಾ ಬ್ರಿಗೇಡ್ ಮುಖ್ಯಸ್ಥೆ ತೃಪ್ತಿ ದೇಸಾಯಿ ಸೇರಿದಂತೆ ಮಹಿಳಾವಾದಿಗಳು ಶಬರಿಮಲೆ ದೇವಸ್ಥಾನದ ಒಳಪ್ರವೇಶಿಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲವೆಂದು ಕೇರಳ ಸರ್ಕಾರ ಹೇಳಿದೆ.

ಶಬರಿಮಲ (ಡಿ.26): ಭೂಮಾತಾ ಬ್ರಿಗೇಡ್ ಮುಖ್ಯಸ್ಥೆ ತೃಪ್ತಿ ದೇಸಾಯಿ ಸೇರಿದಂತೆ ಮಹಿಳಾವಾದಿಗಳು ಶಬರಿಮಲಾ ದೇವಸ್ಥಾನದ ಒಳಪ್ರವೇಶಿಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲವೆಂದು ಕೇರಳ ಸರ್ಕಾರ ಹೇಳಿದೆ.

ತೃಪ್ತಿ ದೇಸಾಯಿ ನೇತೃತ್ವದಲ್ಲಿ ನೂರಾರು ಮಹಿಳೆಯರು ಶಬರಿಮಲಾ ದೇವಸ್ಥಾನ ಪ್ರವೇಶಿಸಲು ಯೋಜಿಸಲಾಗಿತ್ತು. ಇದಕ್ಕೆ ಅವಕಾಶ ನೀಡುವುದಿಲ್ಲವೆಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ.

10-50 ವರ್ಷದೊಳಗಿನ ಮಹಿಳೆಯರು ದೇಗುಲ ಪ್ರವೇಶಿಸಲು ನಿರ್ಬಂಧವಿದೆ. ಈ ವಿಚಾರವು ಸುಪ್ರೀಂಕೋರ್ಟಿನಲ್ಲಿದೆ. ಸುಪ್ರೀಂಕೋರ್ಟ್ ತೀರ್ಪು ನೀಡುವವರೆಗೆ ಯಥಾ ಸ್ಥಿತಿ ಮುಂದುವರೆಯುವುದು ಎಂದು ಶಬರಿಮಲ ಟ್ರಸ್ಟ್ ಹೇಳಿದೆ.

ಸಿಪಿಐ ನೇತೃತ್ವದ ಎಲ್ ಡಿಎಫ್ ಸರ್ಕಾರ ಎಲ್ಲಾ ವಯಸ್ಸಿನ ಮಹಿಳೆಯರಿಗೆ ದೇಗುಲದ ಒಳಗೆ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ.

100 ಜನ ಮಹಿಳೆಯರೊಂದಿಗೆ ಶಬರಿಮಲ ಅಯ್ಯಪ್ಪ ದೇಗುಲ ಪ್ರವೇಶಿಸುವುದಾಗಿ ತೃಪ್ತಿ ದೇಸಾಯಿ ಇತ್ತೀಚಿಗೆ ಹೇಳಿಕೆ ನೀಡಿದ್ದರು.