ಗುಜರಾತ್ ಬಿಜೆಪಿ ಸಂಸದ ಕೆ.ಸಿ ಪಟೇಲ್ ರವರನ್ನು ಹನಿ ಟ್ರಾಪ್ ಬಲೆಯಲ್ಲಿ ಸಿಕ್ಕಿ ಹಾಕಿಸಿದ ಮಹಿಳೆಯೊಬ್ಬಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು 5 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ನವದೆಹಲಿ (ಮೇ.01): ಗುಜರಾತ್ ಬಿಜೆಪಿ ಸಂಸದ ಕೆ.ಸಿ ಪಟೇಲ್ ರವರನ್ನು ಹನಿ ಟ್ರಾಪ್ ಬಲೆಯಲ್ಲಿ ಸಿಕ್ಕಿ ಹಾಕಿಸಿದ ಮಹಿಳೆಯೊಬ್ಬಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು 5 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಹನಿಟ್ರಾಪ್ ನ ಪ್ರಮುಖ ಮಹಿಳಾ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ನಡೆಯುತ್ತಿದೆ. ನಾವು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದೇವೆ.ಸಿಸಿಟಿವಿ ಫೂಟೇಜ್ ಗಳನ್ನು ಬಳಸಿಕೊಂಡು ಸಂಸದರಿಗೆ ಬ್ಲಾಕ್ ಮೇಲ್ ಮಾಡಿ ಸುಲಿಗೆ ಮಾಡುತ್ತಿದ್ದಳು ಎನ್ನಲಾಗಿದೆ. ಈ ಹಿಂದೆ ಸಂಸದರ ವಿರುದ್ಧ ತಿಲಕ್ ನಗರ ಪೋಲೀಸ್ ಸ್ಟೇಷನ್ ನಲ್ಲಿ ಅತ್ಯಾಚಾರದ ದೂರು ನೀಡಿದ್ದಳು. ಆದರೆ ಇಂದು ನ್ಯಾಯಾಲಯದ ಮುಂದೆ ಹಾಜರಾದಾಗ ಆಕೆಯ ವರಸೆಯೇ ಬದಲಾಗಿತ್ತು. ಈ ಕೃತ್ಯದಲ್ಲಿ ಆಕೆಯ ಜೊತೆ ಭಾಗಿಯಾದ ಇನ್ನಿತರ ಸಹಚರರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಈ ಸಂಬಂಧ ಇನ್ನಷ್ಟು ಪುರಾವೆಗಳನ್ನು ಸಂಗ್ರಹಿಸಲಿದ್ದೇವೆ ಎಂದು ವಿಶೇಷ ಪೊಲೀಸ್ ಆಯುಕ್ತ ಮುಕೇಶ್ ಕುಮಾರ್ ಮೀನಾ ಹೇಳಿದ್ದಾರೆ.

ಏನಿದು ಘಟನೆ?

ಗುಜರಾತ್'​ನ ವಲ್ಸದ್'​​ನಿಂದ ಲೋಕಸಭೆಗೆ ಆಯ್ಕೆಯಾಗಿರುವ ಬಿಜೆಪಿ ಸಂಸದ ಕೆ ಸಿ ಪಟೇಲ್ ರನ್ನು ಗಾಜಿಯಾಬಾದ್​​ನ ಪರಿಚಿತ ಮಹಿಳೆಯೊಬ್ಬರು ಮನೆಗೆ ಕರೆಯಿಸಿಕೊಂಡು ಚೆನ್ನಾಗಿ ಕುಡಿಸಿ ತಾನು ಅಶ್ಲೀಲ ಭಂಗಿಯಲ್ಲಿರುವುದನ್ನು ವಿಡಿಯೋ ಮಾಡಿದ್ದಾಳೆ. ಆ ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಹೇಳಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ. 5 ಕೋಟಿ ರೂ ಕೇಳುತ್ತಿದ್ದಾಳೆ ಎಂದು ಬಿಜೆಪಿ ಸಂಸದ ಕೆ.ಸಿ.ಪಟೇಲ್ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು.