ಹೈದರಾಬಾದ್[ಸೆ.15]: ಪತಿರಾಯನೊಬ್ಬ ಲವರ್ ಜೊತೆಗಿದ್ದ ವೇಳೆ ಪತ್ನಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಾಕೊಂಡ ಘಟನೆ ಶನಿವಾರದಂದು ಹೈದರಾಬಾದ್ ನ ಸುಭಾಶ್ ನಗರದಲ್ಲಿ ನಡೆದಿದೆ. ಗಂಡನ ಮೋಸದಾಟ ಅರಿತ ಪತ್ನಿ ಆತನನ್ನು ಅರೆನಗ್ನ ಸ್ಥಿತಿಯಲ್ಲೇ ನಡುರಸ್ತೆಗೆ ಎಳೆತಂದು ಲಟ್ಟಣಿಗೆಯಲ್ಲೇ ಥಳಿಸಿದ್ದಾಳೆ. ಸದ್ಯ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಗೋಪಾಲ್ ಎಂಬಾತ ಕಳೆದ ಏಳು ವರ್ಷಗಳ ಹಿಂದೆ ಆ್ಯಸ್ಟರ್ ಏಂಜಲ್ ರನ್ನು ಮದುವೆಯಾಗಿದ್ದ. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಹೀಗಿದ್ದರೂ ಇತ್ತೀಚೆಗೆ ಪತಿರಾಯ ಹೆಂಡತಿಯಿಂದ ಕೊಂಚ ದೂರವೇ ಉಳಿದಿದ್ದ. ಇದಕ್ಕೆ ಕಾರಣವಾಗಿದ್ದ ಅನೈತಿಕ ಸಂಬಂಧ.

ಹೌದು ಗೋಪಾಲ್ ತಮ್ಮ ಮನೆ ಇದ್ದ ಏರಿಯಾದ ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಬೆಲೆಸಿದ್ದು, ತನ್ನ ಪತ್ನಿ ಹಾಗೂ ಮಕ್ಕಳನ್ನು ನಿರ್ಲಕ್ಷಿಸಲಾರಂಭಿಸಿದ್ದ. ಇದು ಏಂಜಲ್ ಗೆ ತನ್ನ ಪತಿಯನ್ನು ಅನುಮಾನಿಸುವಂತೆ ಮಾಡಿತ್ತು. ಇದರ ಬೆನ್ನಲ್ಲೇ ಸಂಬಂಧಿಕರು ಕೂಡಾ ಗೋಪಾಲ್ ಆ ಮಹಿಳೆಯ ಮನೆಗೆ ತೆರಳುತ್ತಿರುವ ವಿಚಾರವನ್ನು ಏಂಜಲ್ ಗಮನಕ್ಕೆ ತಂದಿದ್ದಾರೆ. ಹೀಗಿರುವಾಗ ಪತ್ನಿ ಗೋಪಾಲ್ ನನ್ನು ಸಾಕ್ಷಿ ಸಮೇತ ಹಿಡಿಯಲು ನಿರ್ಧರಿಸಿದ್ದಾಳೆ.

ಶನಿವರ ಪತಿ ಗೋಪಾಲ್ ಆ ಮಹಿಳೆಯ ಮನೆಗೆ ತೆರಳುವುದನ್ನು ಕಾಯುತ್ತಿದ್ದ ಏಂಜಲ್, ತನ್ನ ಸಂಬಂಧಿಕರೊಂದಿಗೆ ಅಲ್ಲಿಗೆ ತೆರಳಿದ್ದಾಳೆ. ಲವರ್ ಜೊತೆಗೆ ಅರೆನಗ್ನವಾಗಿದ್ದ ತನ್ನ ಪತಿರಾಯನನ್ನು ಅದೇ ಸ್ಥಿತಿಯಲ್ಲಿ ರಸ್ತೆಗೆ ಎಳೆದು ತಂದ ಏಂಜಲ್ ಚಪ್ಪಲಿ, ಲಟ್ಟಣಿಗೆಯಲ್ಲಿ ಥಳಿಸಿದ್ದಾಳೆ. 

ಸದ್ಯ ಈ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.