Asianet Suvarna News Asianet Suvarna News

10 ವರ್ಷಗಳ ಮೊದಲು ಡೈವೋರ್ಸ್ ನೀಡಿದ ಪತ್ನಿಯನ್ನು ನಡುರಸ್ತೆಯಲ್ಲೇ 25 ಬಾರಿ ಇರಿದು ಕೊಂದ ಪತಿ!

ಸಿಗ್'ಡೆಂ ಕಾಕ್ ಎಂಬ ಮಹಿಳೆ ಜನನಿಬಿಡ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆಕೆಯ ಮಾಜಿ ಪತಿ ಮುಸ್ತಫಾ ಕರಾ ಅಡ್ಡಗಟ್ಟಿ ಆಕೆಯ ಕೂದಲೆಳೆದು ಹಲ್ಲೆ ನಡೆಸಿದ್ದಾನೆ. ಬಳಿಕ 25 ಬಾರಿ ಇರಿದು ಮಾರಣಾಂತಿಕ ಗಾಯಗೊಳಿಸಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಇದನ್ನೆಲ್ಲಾ ಕಂಡ ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿ, ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಸಿಗ್'ಡೆಂ ಅನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದ ವೇಳೆ ಆಕೆ ಕೊನೆಯುಸಿರೆಳೆದಿದ್ದಾಳೆ.

Woman stabbed to death by ex husband on busy street Istanbul

ಇಸ್ತಾಂಬುಲ್(ಅ.16): 10 ವರ್ಷಗಳ ಮೊದಲು ತನ್ನ ಪತ್ನಿಗೆ ಡೈವೋರ್ಸ್ ನೀಡಿದ ಪತಿಯೊಬ್ಬ  ನಡುರಸ್ತೆಯಲ್ಲೇ 25 ಬಾರಿ ಇರಿದು ಕೊಂದ ಆಘಾತಕಾರಿ ಘಟನೆ ಟರ್ಕಿಯಲ್ಲಿ ನಡೆದಿದೆ. ಈ ಅಮಾನುಷ ಕೃತ್ಯದ ದೃಶ್ಯಾವಳಿಗಳು ಇಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ.

ಸಿಗ್'ಡೆಂ ಕಾಕ್ ಎಂಬ ಮಹಿಳೆ ಜನನಿಬಿಡ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆಕೆಯ ಮಾಜಿ ಪತಿ ಮುಸ್ತಫಾ ಕರಾ ಅಡ್ಡಗಟ್ಟಿ ಆಕೆಯ ಕೂದಲೆಳೆದು ಹಲ್ಲೆ ನಡೆಸಿದ್ದಾನೆ. ಬಳಿಕ 25 ಬಾರಿ ಇರಿದು ಮಾರಣಾಂತಿಕ ಗಾಯಗೊಳಿಸಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಇದನ್ನೆಲ್ಲಾ ಕಂಡ ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿ, ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಸಿಗ್'ಡೆಂ ಅನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದ ವೇಳೆ ಆಕೆ ಕೊನೆಯುಸಿರೆಳೆದಿದ್ದಾಳೆ.

ಸಿಗ್'ಡೆಂ ಹಾಗೂ ಮುಸ್ತಫಾ ಕಾರ್'ಗೆ ಈ ಮೊದಲು ಮದುವೆಯಾಗಿದ್ದು, ಕೆಲವೊಂದು ಮನಸ್ತಾಪಗಳಿಂದ 10 ವರ್ಷಗಳ ಮೊದಲು ವಿಚ್ಛೇದನವಾಗಿತ್ತು. ಇದಾದ ಬಳಿಕ ಸಿಗ್'ಡೆಂಗೆ ಬೇರೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದರು ಎಂಬ ವಿಚಾರ ತಿಳಿದು ಬಂದಿದೆ.

 

 

Follow Us:
Download App:
  • android
  • ios