ಪ್ರೀತಿಸಲು ನಿರಾಕರಿಸಿದ್ದಾಗಿ ಯುವತಿಗೆ ಯುವಕನೋರ್ವ ಬೆಂಕಿ ಹಚ್ಚಿದ ಘಟನೆ ತೆಲಂಗಾಣದ ಹೈದರಾಬಾದ್ನಲ್ಲಿ ಹಾಡಹಗಲೇ ನಡೆದಿದೆ. ಪ್ರೀತಿಸಲು ನಿರಾಕರಿಸಿದ ಯುವತಿ ಸಂಧ್ಯಾರಾಣಿಗೆ ಯುವಕ ಕಾರ್ತಿಕ್ ಎಂಬಾತ ನಡುರಸ್ತೆಯಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಹೈದ್ರಾಬಾದ್ (ಡಿ.22): ಪ್ರೀತಿಸಲು ನಿರಾಕರಿಸಿದ್ದಾಗಿ ಯುವತಿಗೆ ಯುವಕನೋರ್ವ ಬೆಂಕಿ ಹಚ್ಚಿದ ಘಟನೆ ತೆಲಂಗಾಣದ ಹೈದರಾಬಾದ್ನಲ್ಲಿ ಹಾಡಹಗಲೇ ನಡೆದಿದೆ. ಪ್ರೀತಿಸಲು ನಿರಾಕರಿಸಿದ ಯುವತಿ ಸಂಧ್ಯಾರಾಣಿಗೆ ಯುವಕ ಕಾರ್ತಿಕ್ ಎಂಬಾತ ನಡುರಸ್ತೆಯಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಿಸದೇ ಸಂಧ್ಯಾರಾಣಿ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾಳೆ. ಪ್ರೀತಿಸುವಂತೆ ಸಂಧ್ಯಾರಾಣಿಯ ಬೆನ್ನುಬಿದ್ದಿದ್ದ ಕಾರ್ತಿಕ್ , ಆಕೆ ಪ್ರೀತಿಗೆ ನಿರಾಕರಿಸಿದಳು ಎನ್ನುವ ಕಾರಣದಿಂದ ಆಕೆಯ ಪ್ರಾಣವನ್ನೇ ತೆಗೆದಿದ್ದಾರೆ.
ಇದೀಗ ಈ ಘಟನೆ ಬಳಿಕ ಆರೋಪಿ ಕಾರ್ತಿಕ್ ನನ್ನು ಹೈದರಾಬಾದ್ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
