Asianet Suvarna News Asianet Suvarna News

ಭುಗಿಲೆದ್ದ ದಿಡ್ಡಳ್ಳಿ: ಮಹಿಳಾ ಹೋರಾಟಗಾರ್ತಿಯಿಂದ ಅರೆಬೆತ್ತಲೆ ಪ್ರತಿಭಟನೆ

ತೆರವು ಕಾರ್ಯಾಚರಣೆ  ಎಂಬುದನ್ನು  ಅರಿತ ದಿಡ್ಡಳ್ಳಿ  ಆದಿವಾಸಿ ಮಹಿಳಾ ಮುಖಂಡೆ ಮುತ್ತಮ್ಮ  ಮರವೇರಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದಾರೆ. ಆದಿವಾಸಿ ಜನರ ಗುಡಿಸಲುಗಳನ್ನು ತೆರವು ಮಾಡಿದ್ರೆ ಮರದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮುತ್ತಮ್ಮ  ಹೆದರಿಸ್ತಿದಾರೆ. ಇದರ ನಡುವೆಯೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ಆರಂಭಿಸಿದೆ. ತೆರವು ಕಾರ್ಯಾಚರಣೆಗೆ ಆದಿವಾಸಿ ಜನರು ತೀವ್ರ ವಿರೋಧಿ ವ್ಯಕ್ತಪಡಿಸುತ್ತಿದ್ದಾರೆ.

Woman Protest Half Naked as Diiddalli Struggle Intensify

ಮಡಿಕೇರಿ (ಮೇ.06): ದಿಡ್ಡಳ್ಳಿಯ ದೇವಮಚ್ಚಿ ಆದಿವಾಸಿಗಳ ಪ್ರತಿಭಟನೆ ಮತ್ತೆ ಭುಗಿಲೆದ್ದಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ದಿಡ್ಡಳ್ಳಿಯ ದೇವಮಚ್ಚಿ  ಮೀಸಲು ಅರಣ್ಯದೊಳಗೆ ಅಕ್ರಮ ಪ್ರವೇಶ ಮಾಡಿ ಗುಡಿಸಲು ನಿರ್ಮಿಸಿದ್ದಾರೆ. 600ಕ್ಕೂ ಅಧಿಕ ಆದಿವಾಸಿ ಜನರ ಕುಟುಂಬಗಳ  ಗುಡಿಸಲು ನೀರ್ಮಾಣ ಮಾಡಿದ್ದಾರೆ. ಇವರನ್ನು ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ  ಅರಣ್ಯ ಇಲಾಖೆ  ತೆರವು  ಆರಂಭಿಸಿದೆ. 

ತೆರವು ಕಾರ್ಯಾಚರಣೆ  ಎಂಬುದನ್ನು  ಅರಿತ ದಿಡ್ಡಳ್ಳಿ  ಆದಿವಾಸಿ ಮಹಿಳಾ ಮುಖಂಡೆ ಮುತ್ತಮ್ಮ  ಮರವೇರಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದಾರೆ. ಆದಿವಾಸಿ ಜನರ ಗುಡಿಸಲುಗಳನ್ನು ತೆರವು ಮಾಡಿದ್ರೆ ಮರದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮುತ್ತಮ್ಮ  ಹೆದರಿಸ್ತಿದಾರೆ. ಇದರ ನಡುವೆಯೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ಆರಂಭಿಸಿದೆ. ತೆರವು ಕಾರ್ಯಾಚರಣೆಗೆ ಆದಿವಾಸಿ ಜನರು ತೀವ್ರ ವಿರೋಧಿ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಕಳೆದ  ವರ್ಷ ಡಿಸಂಬರ್'ನಲ್ಲಿ  ಭೂಮಿ ಮತ್ತು ವಸತಿಗೆ ಆಗ್ರಹಿಸಿ ರಸ್ತೆ ಬದಿಯಲ್ಲಿ ಪ್ರತಿಭಟನೆ ನಡೆಸ್ತಾ ಇದ್ದ ಆದಿವಾಸಿ ಜನರು ಕಳೆದ ಎಪ್ರೀಲ್ 28ರಂದು ಜಿಲ್ಲಾಧಿಕಾರಿಗಳು ನಡೆಸಿದ ಸಂಧಾನ ಸಭೆಯಲ್ಲಿ ಜಿಲ್ಲಾಡಳಿತ ಗೊತ್ತು ಮಾಡಿದ ಸ್ಥಳಕ್ಕೆ ಒಪ್ಪಿದ್ದರು. ಬಳಿಕ ಜಿಲ್ಲಾಡಳಿತ ಗೊತ್ತು ಮಾಡಿರೋ ಸ್ಥಳಕ್ಕೆ ತೆರಳಲ್ಲ ಎನ್ನುವ ಮೂಲಕ ಜಿಲ್ಲಾಡಳಿತಕ್ಕೆ ದಿಡ್ಡಳ್ಳಿ ಆದಿವಾಸಿ ಜನರು ಟಾಂಗ್ ನೀಡಿದ್ದರು, ಅಲ್ಲದೆ ಕಳೆದ 5 ದಿನಗಳ ಹಿಂದೆ ರಸ್ತೆ ಬದಿಯಿದ್ದ ಗುಡಿಸಲುಗಳನ್ನು ದೇವಮಚ್ಚಿ ಮಿಸಲು ಅರಣ್ಯದೊಳಗೆ ಶಿಫ್ಟ್ ಮಾಡಿ ಹೋರಾಟ ತೀವ್ರಗೊಳಿಸಿದ್ದಾರೆ.

Follow Us:
Download App:
  • android
  • ios