ಗಂಡಿನ ವೇಷ ತೊಟ್ಟು ಇಬ್ಬರನ್ನು ವರಿಸಿದ ಮಹಿಳೆ : ಉತ್ತರಾಖಂಡದಲ್ಲೊಂದು ಅಚ್ಚರಿ ಪ್ರಕರಣ

First Published 16, Feb 2018, 8:16 AM IST
Woman Poses as Man Marries Two women for Dowry in Nainital
Highlights

ದುಡ್ಡಿಗಾಗಿ ಗಂಡಸರು, ಹಲವು ಮದುವೆಯಾಗುವುದು ಗೊತ್ತು. ಆದರೆ ದುಡ್ಡಿನ ಆಸೆಗೆ ಬಿದ್ದಿದ್ದ ಮಹಿಳೆಯೊಬ್ಬಳು, ತಾನೇ ಗಂಡಿನ ವೇಷ ತೊಟ್ಟು ಇಬ್ಬರು ಮಹಿಳೆಯರನ್ನು ಮದುವೆಯಾದ ಅಚ್ಚರಿಯ ಪ್ರಕರಣವೊಂದು ಉತ್ತರಾಖಂಡ್‌ನಲ್ಲಿ ಬೆಳಕಿಗೆ ಬಂದಿದೆ. ಇದೀಗ ಎರಡನೇ ಪತ್ನಿ, ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

ಡೆಹ್ರಾಡೂನ್‌: ದುಡ್ಡಿಗಾಗಿ ಗಂಡಸರು, ಹಲವು ಮದುವೆಯಾಗುವುದು ಗೊತ್ತು. ಆದರೆ ದುಡ್ಡಿನ ಆಸೆಗೆ ಬಿದ್ದಿದ್ದ ಮಹಿಳೆಯೊಬ್ಬಳು, ತಾನೇ ಗಂಡಿನ ವೇಷ ತೊಟ್ಟು ಇಬ್ಬರು ಮಹಿಳೆಯರನ್ನು ಮದುವೆಯಾದ ಅಚ್ಚರಿಯ ಪ್ರಕರಣವೊಂದು ಉತ್ತರಾಖಂಡ್‌ನಲ್ಲಿ ಬೆಳಕಿಗೆ ಬಂದಿದೆ. ಇದೀಗ ಎರಡನೇ ಪತ್ನಿ, ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

ಉತ್ತರಪ್ರದೇಶದ ಧಮ್‌ಪುರದ ಸ್ವೀಟಿ ಸೇನ್‌ಗೆ ಬಾಲ್ಯದಿಂದಲೂ ಹುಡುಗರಂತೇ ಇರುವ ಆಸೆ. ಹೀಗಾಗಿಯೇ ಹುಡುಗರಂತೆ ಕೂದಲ್‌ ಕಟ್‌ ಮಾಡಿಕೊಂಡು, ಸಿಗರೇಟ್‌ ಸೇವನೆ ಮಾಡಿಕೊಂಡು, ಬೈಕ್‌ ಓಡಿಸಿಕೊಂಡು ಪಕ್ಕಾ ಬಾಲಕರಂತೆ ಜೀವನ ಸಾಗಿಸುತ್ತಿದ್ದಳು. ಈ ನಡುವೆ ಸ್ವೀಟಿ, 2013ರಲ್ಲಿ ಕೃಷ್ಣಾ ಸೇನ್‌ ಹೆಸರಲ್ಲಿ ಫೇಸ್‌ಬುಕ್‌ನಲ್ಲಿ ಖಾತೆ ತೆರೆದಿದ್ದಳು. ಅಲ್ಲಿ ತನ್ನನ್ನು ಹುಡುಗ ಎಂದು ಪರಿಚಯಿಸಿಕೊಂಡಿದ್ದ ಈಕೆ, ಅಲ್ಲಿ ಪರಿಚಯವಾಗಿದ್ದ ಯುವತಿಯನ್ನು 2014ರಲ್ಲಿ ಮದುವೆಯಾಗಿದ್ದಳು. ವಿವಾಹದ ಬಳಿಕ ಪತ್ನಿಯಿಂದ 8.5 ಲಕ್ಷ ವರದಕ್ಷಿಣೆ ಪಡೆದ ಕಾರ್ಖಾನೆಯೊಂದನ್ನು ತೆರೆದಿದ್ದಳು.

ಈ ನಡುವೆ 2016ರಲ್ಲಿ ಫೇಸ್‌ಬುಕ್‌ನಲ್ಲಿ ಪರಿಚಯವಾದ ಮತ್ತೋರ್ವ ಮಹಿಳೆಯನ್ನು ಬಲೆಗೆ ಬೀಸಿಕೊಂಡು ಆಕೆಯನ್ನೂ ಸ್ವೀಟಿ ಮದುವೆಯಾಗಿದ್ದಳು. ವಿಚಿತ್ರವೆಂದರೆ ಈ ಮದುವೆಗೆ ಈಕೆಯ ಮೊದಲ ಪತ್ನಿ ಕೂಡಾ ಬಂದಿದ್ದಳು. ಅದಕ್ಕೆ ಕಾರಣವೆಂದರೆ, ಮೊದಲ ಪತ್ನಿಗೆ ತನ್ನ ಪತಿ ಗಂಡಲ್ಲ ಎಂದು ಗೊತ್ತಾಗಿತ್ತು. ಆದರೆ ಆಕೆಗೆ ನಿನ್ನ ಹಣ ಮರಳಿಸುವುದಾಗಿ ಹೇಳಿ ಮನವೊಲಿಸಿ, ಆಕೆಯನ್ನೂ ಮದುವೆಗೆ ಕರೆ ತಂದಿದ್ದ. ಬಳಿಕ ಇಬ್ಬರನ್ನೂ ಬೇರೆ ಬೇರೆ ಮನೆಯಲ್ಲಿ ಇಟ್ಟಿದ್ದ.

2ನೇ ವಿವಾಹದ ಬಳಿಕ ಎರಡನೇ ಪತ್ನಿಗೂ ಸ್ವೀಟಿ ವರದಕ್ಷಿಣೆ ಕಿರುಕುಳ ಕೊಡಲು ಶುರು ಮಾಡಿದಳು. ಈ ಹಿನ್ನೆಲೆಯಲ್ಲಿ ಆಕೆಯ ಪತ್ನಿ ದೂರು ನೀಡಿದ್ದಳು. ಈ ವೇಳೆ ಪೊಲೀಸರು ಸ್ವೀಟಿಯನ್ನು ವಶಕ್ಕೆ ಪಡೆದು ತದುಕಿದಾಗ ಆತ ಆಕೆಯಲ್ಲ, ಆತ ಎಂದು ಪತ್ತೆಯಾಗಿದೆ.

ಬಚಾವ್‌ ಆಗಿದ್ದು ಹೇಗೆ?: ಇಬ್ಬರೂ ಪತ್ನಿಯರಿಗೂ ಸ್ವೀಟಿ ತನ್ನ ದೇಹವನ್ನು ತೋರಿಸಿರಲಿಲ್ಲ ಜೊತೆಗೆ ದೇಹವನ್ನು ಮುಟ್ಟಲು ಬಿಡುತ್ತಿರಲಿಲ್ಲ. ಆದರೆ ಲೈಂಗಿಕ ಸಾಧನಗಳನ್ನು ಬಳಸಿಕೊಂಡು ಇಬ್ಬರೊಂದಿಗೂ ಸೆಕ್ಸ್‌ ನಡೆಸಿದ್ದಳು. ಹೀಗಾಗಿ ಬಹಳ ಸಮಯದವರೆಗೂ ಇಬ್ಬರೂ ಪತ್ನಿಯರಿಗೆ ತಾವು ಮದುವೆಯಾಗಿದ್ದು, ಹುಡುಗನನ್ನನ್ನು ಹುಡುಗಿಯನ್ನು ಎಂದು ಅರಿವಿಗೇ ಬಂದಿರಲಿಲ್ಲ

loader