ಹಾಲು ಉತ್ಪಾದಕರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಗೆ ಬೆಂಬಲ ಸೂಚಿಸಿದ್ದ ಮಹಿಳೆಯನ್ನು ಕಿಡ್ನಾಪ್ ಮಾಡಿದ್ದಾರೆ.

ತುಮಕೂರು, (ಅ.09): ಹಾಲು ಉತ್ಪಾದಕರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಗೆ ಬೆಂಬಲ ಸೂಚಿಸಿದ್ದ ಮಹಿಳೆಯನ್ನು ಪುಂಡರು ಅಪಹರಿಸಿದ್ದಾರೆ.

ಈ ಘಟನೆ ಇಂದು (ಮಂಗಳವಾರ) ತುಮಕೂರು ಜಿಲ್ಲೆ ಶಿರಾ ತಾಲೂಕಿನ ಯಲದಬಾಗಿಯಲ್ಲಿ ನಡೆದಿದೆ. ಇದೇ ತಿಂಗಳು 30 ನೇ ತಾರೀಕು ಯಲದಬಾಗಿ ಗ್ರಾಮದ ಹಾಲು ಉತ್ಪಾದಕ ಸಂಘಕ್ಕೆ ಚುನಾವಣೆ ಘೋಷಣೆಯಾಗಿತ್ತು.

ಮತ್ತೊಂದೆಡೆ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಅನ್ನಪೂರ್ಣ ಎನ್ನುವರು ಜೆಡಿಎಸ್ ಮುಖಂಡರಿಗೆ ಬೆಂಬಲ ನೀಡಿದ್ದರು. ಈ ವಿಚಾರವಾಗಿ ಗಲಾಟೆ ನಡೆದಿದೆ.

ಇದ್ರಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿಗರು ಆಕ್ರೋಶಗೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಅನ್ನಪೂರ್ಣ ಬಳಿ ಸಂಘದ ಸದಸ್ಯರ ಮತ ಗುರುತಿನ ಪತ್ರಗಳಿದ್ದ, ಚುನಾವಣೆಯಲ್ಲಿ ಮತ ಚಲಾಹಿಸಲು ಗುರುತಿ ಪತ್ರ ನೀಡಬೇಕಿತ್ತು.

ಆದರೆ, ಮತ ಪತ್ರಗಳನ್ನು ನೀಡದಂತೆ ತಡೆಯಲು ಅನ್ನಪೂರ್ಣಮ್ಮಳನ್ನ ಹಾಡಹಗಲೇ ಟಾಟಾ ಸುಮೋ ವಾಹನದಲ್ಲಿ ಎಳೆದೊಯ್ದಿದ್ದಾರೆ.

ಹಾವಿನಾಳು ಹಾಗೂ ಯಲದಬಾಗಿ ಗ್ರಾಮದ ರಂಗನಾಥ್, ನವೀನ್, ಆನಂದ್ ಮತ್ತು ಗುರುಪ್ರಸಾದ್ ಎಂಬುವರು ಈ ಕೃತ್ಯ ಮಾಡಿದ್ದಾರೆ ಎನ್ನಲಾಗುತ್ತಿದೆ.