ರೈಲು ನಿಲ್ದಾಣದಲ್ಲೇ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ ಘಟನ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಥಾಣೆ, ಮಹಾರಾಷ್ಟ್ರ: ರೈಲು ನಿಲ್ದಾಣದ ಪ್ಲಾಟ್'ಫಾರ್ಮ್'ನಲ್ಲೇ ಮಹಿಳೆಯೊಬ್ಬಳು ಮಗಗುವಿಗೆ ಜನ್ಮ ನೀಡಿದ ಘಟನ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಮೀನಾಕ್ಷಿ ಎಂಬ 24 ವರ್ಷ ಪ್ರಾಯದ ಮಹಿಳೆ ತನ್ನ ಪತಿಯೊಂದಿಗೆ ಘಾಟ್ಕೋಪರ್ ಆಸ್ಪತ್ರೆಗೆ ತೆರಳಲು ಥಾಣೆ ರೈಲು ನಿಲ್ದಾಣಕ್ಕೆ ಬಂದಿದ್ದಳು. ಆದರೆ ಅಲ್ಲೇ ಅವಳಿಗೆ ಹೆರಿಗೆ ಬೇನೆ ಕಾಣಿಸಿಕೊಂಡಿದೆ. ಆಕೆಯ ಪತಿ ಕೂಡಲೇ ರೈಲ್ವೇ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾನೆ.

ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ಮಹಿಳಾ ಸಿಬ್ಬಂದಿ ಮಹಿಳೆಗೆ ಹೆರಿಗೆಯಾಗಲು ಸಹಕರಿಸಿದ್ದಾರೆ. ಮಹಿಳೆಯು ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿತ್ರಕೃಪೆ:www.thegenxtimes.com