ಆಗ್ರಾ[ಜೂ. 20]  ನವಜಾತ ಶಿಶುಗಳ ಮರಣ ಸಂಖ್ಯೆ ಇಳಿಮುಖವಾಗುತ್ತಿರುವುದಕ್ಕೆ ಸ್ಪಷ್ಟ ಲೆಕ್ಕ ಹಾಕುವುದರಲ್ಲಿಯೇ ನಾವಿದ್ದೇವೆ. ಇದೆಲ್ಲವನ್ನು ಮೀರಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದು ಹೋಗಿದೆ.

ರುಂಕತಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ್ದ ಗರ್ಭಿಣಿ  ನಂತರ ಮಧ್ಯ ರಸ್ತೆಯಲ್ಲೆ ಮಗುವಿಗೆ ಜನ್ಮ ನೀಡಿದ್ದಾರೆ. ಮಹಿಳೆಯ ಗಂಡ ಲಂಚ ನೀಡಿಲ್ಲ ಎಂಬ ಕಾರಣಕ್ಕೆ ಗರ್ಭಿಣಿಯನ್ನು ಆಸ್ಪತ್ರೆಯಿಂದ ನರ್ಸ್  ಹೊರಹಾಕಿದ್ದಾರೆ.

ನೈನಾ ದೇವಿ ಎನ್ನುವರು  ಭ್ರಷ್ಟಾಚಾರದ ಘೋರ ಪರಿಣಾಮ ಎದುರಿಸಿದ್ದಾರೆ. ಲಖನ್ ಪುರ್ ಹಳ್ಳಿಯ ಶ್ಯಾಂ ಸಿಂಗ್ ಬಳಿ ಆಸ್ಪತ್ರೆ ನರ್ಸ್ ಲಂಚ ಕೇಳಿದ್ದರು. ಕೊಡದಿದ್ದಕ್ಕೆ ಆಸ್ಪತ್ರೆಗೆ ಸೇರಿಸಿಕೊಂಡಿಲ್ಲ.

ಹೆರಿಗೆ ನೋವು ಎದುರಿಸುತ್ತಿದ್ದ ಮಹಿಳೆ ನಂತರ ನಡು ರಸ್ತೆಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಪ್ರಕರಣದ ವರದಿಯನ್ನು ಉತ್ತರ ಪ್ರದೇಶ ಸರಕಾರ ತರಿಸಿಕೊಂಡಿದೆ.