ಸುಪ್ರೀಂಕೋರ್ಟ್’ನಿಂದ  ತ್ರಿವಳಿ ತಲಾಖ್ ಬ್ಯಾನ್ ಮಾಡಲಾಗಿದೆ.  ಇದರ ಬೆನ್ನಲ್ಲೇ  ಉತ್ತರ ಪ್ರದೇಶದ  ಬರೇಲಿ ಜಿಲ್ಲೆಯಲ್ಲಿ ಮಹಿಳೆಯೋರ್ವಳಿಗೆ ಆಕೆಯ ಪತಿ ವರದಕ್ಷಿಣೆ ವಿಚಾರವಾಗಿ ತ್ರಿವಳಿ ತಲಾಖ್ ನೀಡಿದ್ದಾನೆ.

ಲಕ್ನೋ(ಜ.08): ಸುಪ್ರೀಂಕೋರ್ಟ್’ನಿಂದ ತ್ರಿವಳಿ ತಲಾಖ್ ಬ್ಯಾನ್ ಮಾಡಲಾಗಿದೆ. ಇದರ ಬೆನ್ನಲ್ಲೇ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಮಹಿಳೆಯೋರ್ವಳಿಗೆ ಆಕೆಯ ಪತಿ ವರದಕ್ಷಿಣೆ ವಿಚಾರವಾಗಿ ತ್ರಿವಳಿ ತಲಾಖ್ ನೀಡಿದ್ದಾನೆ.

ತರನ್ನುಮ್ ಎಂಬ ಮಹಿಳೆ 2016ರಲ್ಲಿ ವಿವಾಹವಾಗಿದ್ದು, ನಿತ್ಯವೂ ಕೂಡ ಗಂಡನಿಂದ ಕಿರುಕುಳ ಅನುಭವಿಸುತ್ತಿದ್ದರು.

ಪ್ರತಿದಿನವೂ ಕೂಡ ವರದಕ್ಷಿಣೆ ವಿಚಾರವಾಗಿ ಹಿಂಸೆ ನೀಡುತ್ತಿದ್ದರು ಎಂದು ಆಕೆ ದೂರಿದ್ದಾರೆ. ಅಲ್ಲದೇ ಪತಿಯೂ ತನ್ನನ್ನು ಕೊಲ್ಲಲೂ ಕೂಡ ಯತ್ನಿಸಿದ್ದಾಗಿ ಆಕೆ ತಿಳಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಪತ್ನಿ ಕಪ್ಪಗಿದ್ದಾಳೆ ಎಂದು ತ್ರಿವಳಿ ತಲಾಖ್ ನೀಡಲಾಗಿತ್ತು. ಇದೀಗ ಮತ್ತೆ ಅಂತಹದ್ದೇ ಕ್ಷುಲ್ಲಕ ಕಾರಣಕ್ಕೆ ಪತಿ-ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾನೆ.