ಚೆನ್ನೖ :  ವೈದ್ಯಕೀಯ ನಿರ್ಲಕ್ಷಕ್ಕೆ ವೈದ್ಯರನ್ನು ಹೊಣೆ ಮಾಡುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಮಹಿಳೆ ಟ್ಯುಬೆಕ್ಟೊಮಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೂ ಗರ್ಭವತಿಯಾಗಿದ್ದಾಳೆ. ಇದರಿಂದ ಸಿಟ್ಟಾಗಿರುವ ಆಕೆ ವೈದ್ಯರು ಮಾಡಿದ ತಪ್ಪಿಗೆ ತನಗೆ 10 ಲಕ್ಷ ರು. ಪರಿಹಾರ ಕೊಡಬೇಕು ಎಂದು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದಾಳೆ. 

2014 ರಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದ ಬಳಿಕ ಗರ್ಭನಿರೋಧಕ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಟ್ಯುಬೆಕ್ಟೊಮಿ ಚಿಕಿತ್ಸೆ ವಿಫಲವಾಗಿದ್ದರಿಂದ ಮೂರನೇ ಬಾರಿಗೆ ಗರ್ಭಧರಿಸಿದ್ದಾಳೆ. ತನಗೆ ಅನಾರೋಗ್ಯ ಇದ್ದು ಗರ್ಭ ಧರಿಸಿದ್ದರಿಂದ ಜೀವಕ್ಕೆ ಅಪಾಯ ಎದುರಾಗಲಿದೆ. ಹೀಗಾಗಿ ತನಗೆ 10 ಲಕ್ಷ ಪರಿಹಾರ ನೀಡಬೇಕು ಎಂದು ಹೇಳಿದ್ದಾಳೆ.