Asianet Suvarna News Asianet Suvarna News

ಮಾವನೊಂದಿಗೆ ಮಲಗಲು ಸೊಸೆಯನ್ನೇ ಮದುವೆ ಮಾಡಿಸಿದ್ರು!

ತಲಾಖ್ ಕುರಿತು ಸುಪ್ರೀಂ ಕೋರ್ಟ್ ಕಟ್ಟುನಿಟ್ಟುನಿಟ್ಟಿನ ಆದೇಶ ನೀಡಿದ್ದರೂ ದಿನಾ ಒಂದೆಲ್ಲಾ ಒಂದು ರೀತಿಯ ಮುಸ್ಲಿಂ ಮಹಿಳೆಯರ ಶೋಷಣೆ ಪ್ರಕರಣ ಬೆಳಕಿಗೆ ಬರುತ್ತಲೆ ಇವೆ. ಆದರೆ ಈ ಪ್ರಕರಣ ಅದೆಲ್ಲದಕ್ಕಿಂತಲೂ ಭಿನ್ನ. ಮಹಿಳೆಯ ಕಣ್ಣೀರಿನ ಕತೆ.

Woman Forced to Sleep With Father-in-law Under Nikah Halala, Faces Death Threats
Author
Bengaluru, First Published Jul 17, 2018, 3:59 PM IST

ಲಕ್ನೋ[ಜು.17]  ಮುಸ್ಲಿಂ ಮಹಿಳೆಯೊಬ್ಬರು ತಮ್ಮ ಅಂತರಾಳದಲ್ಲಿ ಹುದುಗಿದ್ದ ನೋವನ್ನು ಹೊರಹಾಕಿದ್ದಾರೆ. ಅನೇಕ ಪುರುಷರೊಂದಿಗೆ ಮಲಗುವಂತೆ ಆಕೆಗೆ ನಿರಂತರ ಒತ್ತಡ ಹಾಕಲಾಗುತ್ತಿತ್ತು. ತಲಾಖ್ ಹೆಸರಿನಲ್ಲಿ ನಾಲ್ಕಾರು ಸಾರಿ ವಿಚ್ಛೇದನ ನೀಡಲಾಗಿತ್ತು ಎಂಬ ಆತಂಕಕಾರಿ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

ಬೈರೇಲಿಯ ನಿವಾಸಿ ಸಬೀನಾ ತಾನು ಅನುಭವಿಸಿದ ನೋವನ್ನು ಬಹಿರಂಗವಾಗಿ ಹೇಳುವ ಧೈರ್ಯ ಮಾಡಿದ್ದಾರೆ. ನನಗಾದ ನೋವನ್ನು ಹೇಳಿಕೊಳ್ಳುವುದಕ್ಕೆ ಭಯವಾಗುತ್ತಿದೆ. ನನ್ನ ಪ್ರಾಣಕ್ಕೂ ಸಂಚಕಾರ ಬರುವ ಅಪಾಯವಿದೆ ಎಂದು ಹೇಳಿದ್ದಾರೆ.

ಮೊದಲು ಮದುವೆಯಾದ ಗಂಡ ಆಕೆಗೆ ತಲಾಖ್ ನೀಡಿದ್ದ. ಇದಾದ ಮೇಲೆ ತಲಾಖ್ ನೀಡಿದ ವ್ಯಕ್ತಿಯ ತಂದೆಯೊಂದಿಗೆ ಮದುವೆಯಾಗುವಂತೆ ಒತ್ತಡ ಹೇರಲಾಯಿತು. ಬಲವಂತವಾಗಿ ಮದುವೆಯನ್ನು ಮಾಡಿಕೊಡಲಾಯತು. ಮತ್ತೆ ತಲಾಖ್ ನೀಡಲಾಯಿತು. ಪುನಃ ಹಳೆ ಗಂಡನಿಗೆ ಮದುವೆ ಮಾಡಲಾಯಿತು. ಮತ್ತೆ ವಿಚ್ಛೇದನ ಗಂಡನ ತಮ್ಮನೊಂದಿಗೆ ಮದುವೆ... ಹೀಗೆ ಮಹಿಳೆ ನಿರಂತರ ದೌರ್ಜ್ಯದಿಂದ ಬೇಸತ್ತು ಅಂತಿಮವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

Follow Us:
Download App:
  • android
  • ios