ಕೆನಡಾ[ಜೂ.25]: ಬಸ್ಸಿನಲ್ಲಿ ಇಳಿಯುವ ಸ್ಥಳ ಬಂದರೂ ನಿದ್ದೆ ಮಾಡುತ್ತಲೇ ಇರುವ ವ್ಯಕ್ತಿಗಳನ್ನು ನೋಡಿದ್ದೇವೆ. ಆದರೆ, ವಿಮಾನದಲ್ಲಿ ಹೀಗೆ ಆಗಲು ಸಾಧ್ಯವೇ?

ಕೆನಡಾದ ಕ್ವಿಬೆಕ್‌ನಿಂದ ಟೊರೆಂಟೋಗೆ ತೆರಳುತ್ತಿದ್ದ ವಿಮಾನದಲ್ಲಿ ಮಹಿಳೆಯೊಬ್ಬಳು ನಿದ್ದೆಗೆ ಜಾರಿದ್ದಳು. ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಇಳಿದು ಹೋದರೂ ಆಕೆಗೆ ಎಚ್ಚರವೇ ಆಗಿರಲಿಲ್ಲ. ಪೈಲಟ್‌ ವಿಮಾನವನ್ನು ಶೆಡ್‌ಗೆ ಹಾಕಿ, ಲೈಟ್‌ ಆಫ್‌ ಮಾಡಿ ಹೋಗಿದ್ದ. ಆಕೆಗೆ ಎಚ್ಚರವಾದಾಗ ವಿಮಾದಲ್ಲಿ ಯಾರೂ ಇರಲಿಲ್ಲ. ಫೋನ್‌ ಮಾಡಿ ಸಹಾಯ ಪಡೆಯೋಣವೆಂದರೂ ಸ್ವಿಚ್‌ ಆಫ್‌ ಆಗಿತ್ತು.

ಕೊನೆಗೆ ಕಾಕ್‌ಪಿಟ್‌ನಲ್ಲಿ ದೊರೆತ ಟಾರ್ಚ್ ಸಹಾಯದಿಂದ ಬಾಗಿಲು ತೆರೆದು ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ. ಸಿಬ್ಬಂದಿಯೊಬ್ಬ ಬಂದು ಆಕೆಯನ್ನು ವಿಮಾನದಿಂದ ಕೆಳಗಿಳಿಸಿದ್ದಾನೆ. ಈ ಘಟನೆಯನ್ನು ಆಕೆಯ ಸ್ನೇಹಿತನೊಬ್ಬ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, ಎಲ್ಲರ ಗಮನ ಸೆಳೆದಿದೆ.