ರಾತ್ರಿ 9 ಕ್ಕೆ ಬೆಂಗಳೂರಿಗೆ ತಲುಪಿದವಳು ರಾತ್ರಿ 11ಕ್ಕೆ ಮೃತ್ತಪಟ್ಟಿದ್ದಾಳೆ ಎಂದು ತವರು ಮನೆಗೆ ಕರೆ ಹೋಗಿದೆ. ಸ್ವಾತಿಗೆ ವಿಷಪ್ರಾಷಣ ಮಾಡಿಸಿ ನೇಣು ಹಾಕಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.
ಬೆಂಗಳೂರು (ಅ.13): ತವರು ಮನೆಯಿಂದ ಗಂಡನ ಮನೆಗೆ ಬಂದ ಎರಡೆ ಗಂಟೆಯಲ್ಲಿ ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತಪಟ್ಟಿರುವ ಗೃಹಿಣಿ, ಸ್ವಾತಿ (21), ಮೈಸೂರಿನ ನಂಜನಗೂಡು ತಾಲ್ಲೂಕಿನ ನಂದಿಗುಂದಪುರ ಗ್ರಾಮದ ನಿವಾಸಿಯಾಗಿದ್ದಾರೆ.
4 ವರ್ಷಗಳ ಹಿಂದೆ ಚೇತನ್ ಎಂಬುವರ ಜೊತೆ ವಿವಾಹ ಆಗಿತ್ತು. ಸ್ವಾತಿ, ನಿನ್ನೆ ನಂದಿಗುಂದಪುರದಿಂದ ಗಂಡನ ಜೊತೆ ಬೆಂಗಳೂರಿಗೆ ಬಂದಿದ್ದಳು.
ರಾತ್ರಿ 9 ಕ್ಕೆ ಬೆಂಗಳೂರಿಗೆ ತಲುಪಿದವಳು ರಾತ್ರಿ 11ಕ್ಕೆ ಮೃತ್ತಪಟ್ಟಿದ್ದಾಳೆ ಎಂದು ತವರು ಮನೆಗೆ ಕರೆ ಹೋಗಿದೆ.
ಸ್ವಾತಿಗೆ ವಿಷಪ್ರಾಷಣ ಮಾಡಿಸಿ ನೇಣು ಹಾಕಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.
ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸ್ವಾತಿಯ ಪತಿ ಚೇತನ್ ಸೇರಿದಂತೆ ಅತ್ತೆ ಮಾವ ಪರಾರಿಯಾಗಿದ್ದಾರೆ.
