Asianet Suvarna News Asianet Suvarna News

ಹಳಸಿದ ಸಂಬಂಧ : ರಾಜೇಂದ್ರನ ಗುಪ್ತಾಂಗ ಕತ್ತರಿಸಿದ ಕಮಲ

ಮಹಿಳೆಯೋರ್ವಳು ತನ್ನ ಪ್ರಿಯಕರನ ಗುಪ್ತಾಂಗವನ್ನೆ ಚೂಪಾದ ಆಯುಧದಿಂದ ಕತ್ತರಿಸಿದ ಘಟನೆ ಒಡಿಶಾದಲ್ಲಿ ನಡೆದಿದೆ. 

Woman cuts boyfriend's private part
Author
Bengaluru, First Published Nov 12, 2018, 12:31 PM IST

ಒಡಿಶಾ : ಕೆಲ ಸಂಬಂಧಗಳು ಹೇಗೆ ಬೆಳೆಯುತ್ತವೆ ಮತ್ತು ಅವು ಯಾವಾಗ ಮತ್ತು ಯಾಕಾಗಿ ಕೊನೆಯಾಗುತ್ತವೆ ಎಂದು ಹೇಳೋಕ್ಕಾಗಲ್ಲ. ಹಾಗೆಯೇ ಒಡಿಶಾದಲ್ಲೂ ವಿವಾಹಿತೆ ಕಮಲಾ ಪಾತ್ರ (24 ) ಮತ್ತು ರಾಜೇಂದ್ರ ನಾಯಕ್ ನಡುವಿನ ಸಲಿಗೆ ಅಕ್ರಮ ಸಂಬಂಧವಾಗಿತ್ತು. ಈ ನಡುವೆ, ರಾಜೇಂದ್ರ ಕೆಲಸ ಅರಸಿ ಚೆನ್ನೈಗೆ ಹೋದ. 

ಆದರೆ, ಆಗಿಂದಾಗೆ ಗ್ರಾಮಕ್ಕೆ ಬಂದಾಗ, ಮಹಿಳೆ ಮನೆಯಲ್ಲೇ ಹೆಚ್ಚು ವಿರಮಿಸುತ್ತಿದ್ದ. ಅದರಂತೆ ಇತ್ತೀಚೆಗೆ, ಗ್ರಾಮಕ್ಕೆ ಬಂದ ರಾಜೇಂದ್ರ, ಕಮಲಾ ಮನೆಗೆ ಹೋಗಿದ್ದ. 

ಈ ವೇಳೆ ಇಬ್ಬರ ನಡುವೆ ಕಲಹ ಉಂಟಾಗಿದ್ದು, ಈ ವೇಳೆ ಸಿಟ್ಟಿಗೆದ್ದ ಮಹಿಳೆ, ಚೂಪಾದ ಆಯುಧದಿಂದ ರಾಜೇಂದ್ರನ ಗುಪ್ತಾಂಗವನ್ನೇ ಕತ್ತರಿಸಿದ್ದಾಳೆ. ರಾಜೇಂದ್ರ ಈಗ ಆಸ್ಪತ್ರೆ ಸೇರಿದ್ದಾನೆ.

Follow Us:
Download App:
  • android
  • ios