ತ್ರಿಪುರಾ[ಜು. 19]  ಪಶ್ಚಿಮ ತ್ರಿಪುರಾ ಜಿಲ್ಲೆಯ ಸಾಧುತಿಲ್ಲ ಪ್ರದೇಶ ವ್ಯಾಪ್ತಿಯ ಪ್ರತಾಪಗಢದ ರತ್ನಾ ಪೋಡ್ಡಾರ್[38] ಮತ್ತು ಚಂದನ್ ಕಾಂತಿ ಧರ್ [47]  ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ರತ್ನಾ  ಹೇಳುವಂತೆ ಮದುವೆ ಸಮಯದಲ್ಲಿ ವರದಕ್ಷಿಣೆಯಂಥ ಯಾವುದೇ ಬೇಡಿಕೆ ಇಟ್ಟಿರಲಿಲ್ಲ.

ಆದರೆ ಮದುವೆಯಾದ ನಂತರ ವರದಕ್ಷಿಣೆಗಾಗಿ ಕಿರುಕುಳ ಆರಂಭವಾಯಿತು. ಅತ್ತೆ, ಭಾಮೈದ ಸೇರಿದಂತೆ ನೆರೆ ಮನೆಯವರು ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆ ಆರೋಪ ಮಾಡಿದ್ದಾರೆ.

ನನ್ನ ತವರು ಮನೆಯಲ್ಲಿದ್ದ ಜಮೀನನನ್ನು ಮಾರಿ ವರದಕ್ಷಿಣೆ ರೂಪದಲ್ಲಿ 2 ಲಕ್ಷ ರೂ. ನೀಡಲಾಗಿತ್ತು.  ತನ್ನ ಗಂಡ ಮತ್ತು ಸಂಬಂಧಿಕರ ಮಹಿಳೆ ನಡುವೆ ಅಫೇರ್ ಇದೆ ಎಂಬ ಅನುಮಾನವೂ ನನಗೆ ಬಂದಿತ್ತು. ಇದಾದ ಕೆಲ ದಿನದಲ್ಲಿ ನಾಲ್ಕು ರೂಂ ನ ಮನೆಗೆ 5 ಸಿಸಿಟಿವಿ ಅಳವಡಿಕೆ ಮಾಡಿದರು.  ಅಲ್ಲಿಂದ ನಂತರ ನಾನು ನನ್ನ ಅಮ್ಮನೊಂದಿಗೆ ವಾಸ ಮಾಡಲು ಆರಂಭಿಸಿದೆ ಎಂದು ಮಹಿಳೆ ಹೇಳುತ್ತಾರೆ.

ಸಿಸಿಟಿವಿಯಲ್ಲಿ ಕಂಡು ಬಂತು ವಿಚಿತ್ರ ಜೀವಿ: ನೀವೇನಾದ್ರೂ ನೋಡಿದ್ದೀರಾ?

ಮನೆಯ  ಎಲ್ಲ ಕಡೆ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಮುಖ್ಯ ದ್ವಾರ, ಕಾರಿಡಾರ್, ಅತ್ತೆಯ ಕೋಣೆ, ಮತ್ತೊಂದು ಕೋಣೆ ಹಾಗೂ ನಮ್ಮ  ಬೆಡ್ ರೂಂಗೂ ಕ್ಯಾಮರಾ ಹಾಕಲಾಗಿದೆ.  ನನ್ನ ಅತ್ತೆಯ ಕೋಣೆಯಲ್ಲಿ ಮಾನಿಟರ್ ಇಡಲಾಗಿದೆ. ನಾನು ಒಬ್ಬ ಮಹಿಳೆ,, ನನ್ನ ಪರ್ಸನಲ್ ಸ್ಪೇಸ್ ಗೆ ಇದು ಧಕ್ಕೆ ತಂದಿದ್ದು ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.